ಪಳ್ಳಿ ಕೊಲೆಗೈದು ಶವವನ್ನು ಹೂತ ಆರೋಪಿಗಳ ಬಂಧನ
ಕಾರ್ಕಳ : ಪಳ್ಳಿ ಗ್ರಾಮದ ನಿಂಜೂರು ಮೂಡುಮನೆ ಎಂಬಲ್ಲಿ ಕಳೆದ ಶುಕ್ರವಾರ ವ್ಯಕ್ತಿಯೊಬ್ಬರ ಕಳೇಬರಹ ಪತ್ತೆಯಾಗಿತ್ತು ,ಕಳೇಬರಹದ ಮರಣೋತ್ತರ ಪರೀಕ್ಷೆ ತಹಸೀಲ್ದಾರ್ ಸಮ್ಮುಖದಲ್ಲಿ ನಡೆಸಿ ತನಿಖೆ ಕೈ ಗೊಂಡ ಕಾರ್ಕಳ ಪೊಲೀಸರು ಮೃತ ವ್ಯಕ್ತಿಯನ್ನು ದಾವಣಗೆರೆ ಮೂಲದ ಮನ್ಸೂರ್ ಅಲಿ ಎಂದು ಗುರುತಿಸಲಾಗಿದೆ. ಮನ್ಸೂರ್ ಅಲಿ ಆರ್ಟಿಒ ಬ್ರೋಕರ್ ಆಗಿ ಕೆಲಸ ಮಾಡುತ್ತಿದ್ದು ಹಣದ ವಿಚಾರಕ್ಕೆ ಸಂಬಂಧಿಸಿದಂತೆ ಈ ಕೊಲೆ ನಡೆಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ .ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಫಯಾಜ್ ( 45 ), ಪ್ರಶಾಂತ್ ಬಲ್ಲಾಳ್ ಮತ್ತು ಪ್ರಮೋದ್ ಬಲ್ಲಾಳ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ
No comments