ಡಿ.20ರಂದು ಮಂಗಳೂರಿನಲ್ಲಿ ಮುಸ್ಲಿಂ ಮಹಿಳೆಯರ ಶಕ್ತಿ ಪ್ರದರ್ಶನ
ಮಂಗಳೂರು : ವಿವಿಧ ಮುಸ್ಲಿಂ ಸಂಘಟನೆಗಳ ನೇತೃತ್ವದಲ್ಲಿ ಮುಸ್ಲಿಂ ಮಹಿಳೆಯರ ಸಮಾವೇಶ ನಡೆಯಲಿದ್ದು ವಿವಿಧ ಸಂಘಟನೆಗಳ ಮಹಿಳಾ ಹೋರಾಟಗಾರರು ಭಾಗವಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ .
ಡಿಸೆಂಬರ್ 20ರಂದು ಬೆಳಗ್ಗೆ 9.30ಕ್ಕೆ ಆರಂಭವಾಗಲಿರುವ ಸಮಾವೇಶ ಮಧ್ಯಾಹ್ನ 1.30ಕ್ಕೆ ಸಮಾರೋಪಗೊಳ್ಳಲಿದೆ. 'ತಲಾಖ್ ಕಾನೂನು' ವಿಷಯದಲ್ಲಿ ಸಲಫಿ ಗರ್ಲ್ಸ್ ಆಂಡ್ ವುಮೆನ್ಸ್ ಮೂವ್ ಮೆಂಟ್ ನ ಮುಮ್ತಾಜ್ ಬಿಂತ್ ಶಂಸುದ್ದೀನ್ ವಿಚಾರ ಮಂಡಿಸಲಿದ್ದಾರೆ.'ಏಕರೂಪ ನಾಗರಿಕ ಸಂಹಿತೆ' ವಿಷಯ ಮತ್ತು 'ಇಸ್ಲಾಂನಲ್ಲಿ ಕೌಟುಂಬಿಕ ಜೀವನ' ಎಂಬ ವಿಷಯದ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ
No comments