Breaking News

ಹೈದ್ರಾಬಾದ್ 2013 ಬಾಂಬ್ ಸ್ಫೋಟ ಯಾಸಿನ್ ಭಟ್ಕಳ್ ಸೇರಿ ನಾಲ್ಕು ಜನರಿಗೆ ಗಲ್ಲು ಶಿಕ್ಷೆ


ಹೈದರಾಬಾದ್ : ಇಂಡಿಯನ್ ಮುಜಾಹಿದೀನ್ ಸಹ ಸಂಸ್ಥಾಪಕ ಯಾಸಿನ್ ಭಟ್ಕಳ್ ಹಾಗೂ ಇತರ ನಾಲ್ವರಿಗೆ 2013 ಹೈದರಾಬಾದ್ ದಿಲ್ ಸುಖ್ ನಗರ್ ಅವಳಿ ಬಾಂಬ್ ಸ್ಪೋಟಕ್ಕೆ  ಸಂಬಂಧಿಸಿದಂತೆ NIA ಕೋರ್ಟ್  ಮರಣದಂಡನೆ ವಿಧಿಸಿದೆ .
ದಿಲ್ ಸುಖ್ ನಗರ್ ಅವಳಿ ಸ್ಫೋಟ ಬಾಂಬ್ ಸ್ಪೋಟದಲ್ಲಿ 18  ಜನ ಮೃತ ಪಟ್ಟಿದ್ದರು ,130 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು ,ಪ್ರಕರಣಕ್ಕೆ ಸಂಬಂಧಿಸಿ 150 ಸಾಕ್ಷಿಗಳನ್ನು ಪರಿಶೀಲಿಸಿ ಮತ್ತು ದೀರ್ಘ ಕಾಲದ ವಿಚಾರಣೆ ನಡೆಸಿ ಇಂದು  NIA ಕೋರ್ಟ್ ಯಾಸಿನ್ ಭಟ್ಕಳ್ ಹಾಗೂ ಇತರ ನಾಲ್ವರಿಗೆ ದೋಷಿ ಎಂದು ಗಲ್ಲು ಶಿಕ್ಷೆ ವಿಧಿಸಿದೆ .
ಯಾರಿವನು ಯಾಸಿನ್ ಭಟ್ಕಳ್..?
ಜನವರಿ 15, 1983ರಲ್ಲಿ ಕರ್ನಾಟಕದ ಭಟ್ಕಳದಲ್ಲಿ ಹುಟ್ಟಿದವನು ಯಾಸಿನ್. ಇಂಡಿಯನ್ ಮುಜಾಹಿದೀನ್ ಸಂಘಟನೆ ಸ್ಥಾಪಕರಾದ ರಿಯಾಜ್ ಹಾಗೂ ಇಕ್ಬಾಲ್ ಭಟ್ಕಳ್ ಗೆ ತುಂಬ ಹತ್ತಿರದವರು. ಯಾಸಿನ್ ನ ಮೂಲ ಹೆಸರು ಅಹ್ಮದ್ ಜರಾರ್ ಸಿದ್ದಿಬಾಬ. ಆತನಿಗೆ ಶಾರುಕ್ ಖಾನ್, ಶಿವಾನಂದ್ ಹಾಗೂ ಡಾ.ಇಮ್ರಾನ್ ಹೀಗೆ ಹಲವು ಹೆಸರುಗಳಿವೆ. ಆತ ತನ್ನ ಹುಟ್ಟೂರಿನಲ್ಲಿ ಬಹಳ ಕಾಲ ಕಳೆದವನಲ್ಲ. ತನ್ನ ತಂದೆಯ ಗಾರ್ಮೆಂಟ್ ವ್ಯವಹಾರಕ್ಕೆ ನೆರವಾಗುವ ಉದ್ದೇಶಕ್ಕೆ ದುಬೈಗೆ ತೆರಳಿದ. ಆತನ ಮೇಲೆ ಪ್ರಭಾವ ಬೀರಿದವನು ರಿಯಾಜ್. ಯಾಸಿನ್ ಭಾರತಕ್ಕೆ ಹಿಂತಿರುಗಿದವನೇ ಇಂಡಿಯನ್ ಮುಜಾಹಿದೀನ್ ಗೆ ಕೆಲಸ ಮಾಡಲು ಶುರು ಮಾಡಿದ.ಯಾಸಿನ್ ಗೆ ಹಣ ಹೊಂದಿಸುವ ಜವಾಬ್ದಾರಿ ವಹಿಸಲಾಯಿತು. ಅದಕ್ಕಾಗಿ ಆತ ನಿರ್ಮಾಣದ ವ್ಯವಹಾರ ಶುರು ಮಾಡಿದ. ತುಂಬ ಶೀಘ್ರವಾಗಿ ಹದಿನಾಲ್ಕು ಲಕ್ಷ ರುಪಾಯಿ ಒಟ್ಟು ಮಾಡಿದ್ದ. 
ಇನ್ನು ಪಶ್ಚಿಮ ಬಂಗಾಲ ಮೂಲದ ವ್ಯಕ್ತಿಯೊಬ್ಬನ ಜತೆಗೆ ಸೇರಿ ನಕಲಿ ನೋಟು ದಂಧೆಯಲ್ಲಿ ಕೂಡ ತೊಡಗಿದ. ಆ ನಂತರ ಯಾಸಿನ್ ಗೆ ಬಾಂಬ್ ತಯಾರಿಸುವುದನ್ನು ಕಲಿಸಲಾಯಿತು. ತುಂಬ ಬೇಗ ಬಾಂಬ್ ತಯಾರಿ ಕಲಿತ, ಅದರಲ್ಲಿ ಪಳಗಿಬಿಟ್ಟ. ಯೋಜನೆ ರೂಪಿಸಿದ ಎಲ್ಲ ವಿಧ್ವಂಸಕ ಕೃತ್ಯಗಳಲ್ಲಿ ಆತನೇ ಬಾಂಬ್ ತಯಾರಿಸುತ್ತಿದ್ದ. ಧ್ವಂಸಕ ಕೃತ್ಯ ಮಾಡುವ ಮೂಲಕವೇ ಸಂದೇಶ ಕಳಿಸಬೇಕು ಎಂದು ನಂಬಿದ್ದ ಯಾಸಿನ್, ಹಳೆ ತಂಡದ ರೀತಿ ಕೃತ್ಯದ ಜವಾಬ್ದಾರಿ ಹೊತ್ತಿಕೊಳ್ಳುವುದು, ಇ ಮೇಲ್ ಕಳಿಸುವುದೆಲ್ಲ ಮಾಡ್ತಿರಲಿಲ್ಲ. ಆದರೆ ನಿರಂತರವಾಗಿ ದಾಳಿಗಳನ್ನು ಮಾತ್ರ ರೂಪಿಸುತ್ತಿದ್ದ. 
13/7 ಮುಂಬೈ ರೈಲು ಸ್ಫೋಟ 2006, ದೆಹಲಿ ಸ್ಫೋಟ 2010, ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ ಬಳಿ ಸ್ಫೋಟ 2010, ಪುಣೆಯ ಜರ್ಮನ್ ಬೇಕರಿ ಸ್ಫೋಟ 2010, ದೆಹಲಿ ಹೈ ಕೋರ್ಟ್ ಸ್ಫೋಟ 2011, ಮುಂಬೈ ಸರಣಿ ಸ್ಫೋಟ 2011, ದಿಲ್ ಸುಖ್ ನಗರ್ ಸ್ಫೋಟ 2013- ಈ ಎಲ್ಲದರ ಯೋಜನೆ ಹಾಗೂ ಅದರ ಜಾರಿ ಹೊಣೆ ಯಾಸಿನ್ ಭಟ್ಕಳ್ ದೇ. 
ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳೋಣ ಪಾಕಿಸ್ತಾನಕ್ಕೆ ಬಾ ಅಂತ ಯಾಸಿನ್ ನನ್ನು ರಿಯಾಜ್ ಕರೆದಿದ್ದ. ಅಲ್ಲಿಗೆ ಹೋಗಲು ನೇಪಾಳ ಮೂಲಕ ತೆರಳುವಾಗ ಭಾರತದ ಗುಪ್ತಚರ ಇಲಾಖೆ ಆತನನ್ನು ಬಂಧಿಸಿತು. ತನ್ನ ಕಾರ್ಯಾಚರಣೆ ವೇಳೆ ಫೋನೇ ಬಳಸದ ಯಾಸಿನ್ , ತನ್ನ ಹೆಂಡತಿಗೊಂದು ಕರೆ ಮಾಡಿದ್ದ. ಅದು ಗುಪ್ತಚರ ಇಲಾಖೆ ಅಧಿಕಾರಿಗಳ ಕಿವಿಗೆ ಬಿದ್ದಿತ್ತು. ಆತನನ್ನು ಬಂಧಿಸಿದರು. ಖಚಿತಪಡಿಸದ ಮೂಲಗಳ ಪ್ರಕಾರ ಇಂಡಿಯನ್ ಮುಜಾಹಿದೀನ್ ನ ಒಳಗಿನವರೇ ಯಾಸಿನ್ ಭಟ್ಕಳ್ ನ ಚಲನವಲನದ ಬಗ್ಗೆ ಮಾಹಿತಿ ನೀಡಿ, ಸೆರೆಯಾಗುವಂತೆ ಮಾಡಿದರು.

No comments