Breaking News

ಕನ್ನಡಿಗ ಕರುಣ್ ನಾಯರ್ ಇಂಗ್ಲೆಂಡ್ ವಿರುದ್ಧದ ಐದನೇ ಟೆಸ್ಟ್ ಪಂದ್ಯದಲ್ಲಿ ತ್ರಿಶತಕ ಸಾಧನೆ.

ಚೆನ್ನೈ : ಚೆನ್ನೈನ ಚಿಪಾಕ್'ನಲ್ಲಿರುವ ಎಂ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದನೇ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗ ಕರುಣ್ ನಾಯರ್ ತ್ರಿಶತಕ ಸಾಧನೆ ಮಾಡಿದ್ದಾರೆ.
ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಕರುಣ್ ನಾಯರ್ ಚೊಚ್ಚಲ ತ್ರಿಶತಕ ಸಾಧನೆ ಮಾಡಿದ್ದು, ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ನಾಯರ್ ಒಟ್ಟು 381 ಎಸೆತಗಳಲ್ಲಿ 32 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 303 ರನ್ ಸಿಡಿಸುವ ಮೂಲಕ ಈ ಸಾಧನೆಗೈದಿದ್ದಾರೆ. 

ಕರುಣ್ ನಾಯರ್ ತಾವಾಡಿದ ಮೂರನೇ ಟೆಸ್ಟ್ ಪಂದ್ಯದಲ್ಲಿಯೇ ತ್ರಿಶತಕದ ದಾಖಲೆ ಮಾಡಿದ್ದಾರೆ. ಈ ಹಿಂದೆ 2008 ರಲ್ಲಿ ವೀರೇಂದ್ರ ಸೆಹ್ವಾಗ್ ದಕ್ಷಿಣ ಆಪ್ರಿಕಾ ವಿರುದ್ದ ತ್ರಿಶಕ ಸಿಡಿಸಿದ ನಂತರ ಯಾರೊಬ್ಬ ಭಾರತೀಯನು ತ್ರಿಶತಕ ಸಿಡಿಸಿರಲಿಲ್ಲ.

ಕರುಣ್ ನಾಯರ್ ಅಜೇಯ 303 ರನ್ ನೆರವಿನಿಂದ ಭಾರತ 759/7d ರನ್ ಗಳಿಸಿದೆ, ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಗರಿಷ್ಟ ಮೊತ್ತವಾಗಿದೆ. ಈ ಹಿಂದೆ ಶ್ರೀಲಂಕಾ ವಿರುದ್ಧ ಗಳಿಸಿದ್ದ 726/9 ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಗರಿಷ್ಟ ಮೊತ್ತವಾಗಿತ್ತು..

No comments