24 ಗಂಟೆಯೊಳಗೆ ಹಲ್ಲೆನಡೆಸಿದ ಆರೋಪಿಗಳನ್ನು ಬಂಧಿಸದಿದ್ದರೆ ಉಗ್ರಹೋರಾಟ - ಹಿಂ.ಜಾ.ವೇ
ವಿಟ್ಲ : ಹಿಂದೂ ಜಾಗರಣವೇದಿಕೆ ವಿಟ್ಲ ತಾಲೂಕಿನ ಸಹಸಂಚಾಲಕ ರಾಜೇಶ್ ಮಿತ್ತನಡ್ಕ ಹಾಗೂ ಕಾರ್ಯಕರ್ತ ರಮೇಶ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಆರೋಪಿಗಳನ್ನು ವಿಟ್ಲ ಪೋಲೀಸರು ಬಂಧಿಸದಿರುವ ಕುರಿತು ಹಿಂದೂ ಜಾಗರಣ ವೇದಿಕೆಯು ವಿಟ್ಲ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದು, 24 ಗಂಟೆಗಳೊಳಗೆ ಅಪರಾಧಿಗಳನ್ನು ಬಂಧಿಸದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಸಿದ್ದಾರೆ.
ಅನ್ಯಮತೀಯರು ನಡೆಸಿದ ಹಲ್ಲೆಯಿಂದ ರಾಜೇಶ್ ಅವರ ತಲೆಗೆ ಗಂಭೀರ ಗಾಯವಾಗಿದ್ದು, ಅಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಕಾರ್ಯಕರ್ತ ರಮೇಶ್ ಮೇಲೆ ಹಲ್ಲೆ ನಡೆಸಿರುವ ಗುಂಪು ಜಾತಿನಿಂದನೆ ಮಾಡಿದೆ ಎಂದು ಆರೋಪಿಸಲಾಗಿದೆ.
ಪೋಲೀಸರು ಹಲ್ಲೆಕೋರರ ಮೇಲೆ ಕೊಲೆಯತ್ನ, ಜಾತಿನಿಂದನೆ ಪ್ರಕರಣ ದಾಖಲಿಸಿದ್ದು , ಪ್ರಕರಣಕ್ಕೆ ರಾಜಕೀಯ ಹಸ್ತಕ್ಷೇಪದಿಂದಾಗಿ ಆರೋಪಿಗಳ ಬಂಧನವಾಗಿಲ್ಲ. ಪೋಲೀಸ್ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸಮಾಡುತ್ತಿದ್ದರು ದುಷ್ಟ ರಾಜಕಾರಣಿಗಳು ಅಡ್ಡಗಾಲಿಡುತ್ತಿದ್ದಾರೆ ಎಂದು ಹಿಂ.ಜಾ.ವೇ ಆರೋಪಿಸಿದೆ.
ಆರೋಪಿ ಹಲ್ಲೆಕೋರರು ಸುಖಾಸುಮ್ಮನೆ ವಿಟ್ಲದ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಸರಕಾರಿ ವೈದ್ಯರಾದ ಪ್ರಶಾಂತ್ ಮತಾಂಧ ಹಲ್ಲೆಕೋರರಿಗೆ ಸಹಕರಿಸುತ್ತಿದ್ದಾರೆ.ಜೊತೆಗೆ ಸ್ಥಳೀಯ ಜಿ.ಪಂ ಸದಸ್ಯನಾದ ಎಮ್.ಎಸ್.ಮಹಮ್ಮದ್ ಆರೋಪಿಗಳನ್ನು ಬಂಧಿಸದಂತೆ ಪೋಲೀಸರ ಮೇಲೆ ಒತ್ತಡ ಹೇರಿದ್ದಾನೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಪತ್ರಿಕಾ ಗೋಷ್ಟಿಯಲ್ಲಿ ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಅಧ್ಯಕ್ಷ ಶ್ರೀ ರತ್ನಾಕರ ಶೆಟ್ಟಿ ಕಲ್ಲಡ್ಕ, ಜಿಲ್ಲಾ ಕಾರ್ಯದರ್ಶಿ ಶ್ರೀ ಅಜಿತ್ ರೈ ಹೊಸಮನೆ, ತಾಲೂಕು ಅಧ್ಯಕ್ಷ ನರಸಿಂಹ ಮಾಣಿ, ತಾಲೂಕು ಸಂಚಾಲಕ ಬ.ಗಣರಾಜ ಭಟ್ ಕೆದಿಲ, ತಾಲೂಕು ಕಾರ್ಯದರ್ಶಿ ಮನೋಜ್ ಪೆರ್ನೆ, ಮಿತ್ತನಡ್ಕ ದ ಸಂಚಾಲಕ ಪ್ರಮೋದ್, ಅಧ್ಯಕ್ಷ ಪ್ರಸಾದ್ ,ನಿಧಿಪ್ರಮುಖ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
No comments