Breaking News

ಆದಿವಾಸಿಗಳು ವಾಸವಿದ್ದ ಗುಡಿಸಲು ಧ್ವಂಸ ಪ್ರತಾಪ್ ಸಿಂಹ ಸಮರ್ಥನೆ


ಮಡಿಕೇರಿ : ಕೊಡಗು ಜಿಲ್ಲೆಯ ವಿರಾಜಪೇಟೆಯ ದಿಡ್ಡಳ್ಲಿಯ ಅರಣ್ಯದಲ್ಲಿ ಗುಡಿಸಲು ಕಟ್ಟಿ ವಾಸಿಸುತ್ತಿದ್ದ 577 ಆದಿವಾಸಿ ಕುಟುಂಬಗಳನ್ನು ಜಿಲ್ಲಾಡಳಿತ ಹೊರದಬ್ಬಿದೆ. ಆದಿವಾಸಿಗಳು ವಾಸವಿದ್ದ ಪ್ರದೇಶ ಮೀಸಲು ಅರಣ್ಯ ಪ್ರದೇಶವೆಂದು ಗುಡಿಸಲುಗಳನ್ನು ಧ್ವಂಸ ಮಾಡಿ ವೃದ್ದರು, ಹೆಂಗಸರು, ಮಕ್ಕಳು, ಹಸುಗೂಸುಗಳೆಂದೂ ನೋಡದೆ ಹೊರಹಾಕಿದ್ದಾರೆ  ಆದಿವಾಸಿಗಳಿಂದ  ಪ್ರತಿಭಟನೆಗೆ ಬಾರಿ ಪ್ರತಿಭಟನೆ ವ್ಯಕ್ತವಾಗುತ್ತಿದೆ .

ಈ ಹಿನ್ನಲೆಯಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಮೈಸೂರಿನ ಸಂಸದ ಪ್ರತಾಪ್​ ಸಿಂಹ  ದಿಡ್ಡಹಳ್ಳಿ ಆದಿವಾಸಿಗಳ ಪ್ರತಿಭಟನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ದಿಡ್ಡಳ್ಳಿಲ್ಲಿ ಯಾವುದೇ ಕಾರಣಕ್ಕೂ ಜಾಗ ಕೊಡಲು ಸಾಧ್ಯವಿಲ್ಲ.  ದುಬಾರೆಯಲ್ಲಿ ಡಿನೋಟಿಫೈ ಮಾಡಿದ ಭೂಮಿ ಇದೆ ಅಲ್ಲಿ ಬೇಕಾದರೆ  ಪುನರ್ ವಸತಿ ಕಲ್ಪಿಸಬಹುದು ಅಂತಾ ಹೇಳಿದ್ದಾರೆ.

ಒಬ್ಬ ಜನ ಪ್ರತಿನಿಧಿಯಾಗಿ ಈ ರೀತಿ ಹೇಳಿಕೆ ನೀಡಿದ ಪ್ರತಾಪ್ ಸಿಂಹ ಅವರ ವಿರುದ್ಧ ವ್ಯಾಪಕ ಆಕ್ರೋಶ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ

No comments