Breaking News

ನೇತ್ರಾವತಿ ಉಳಿಸಿ ಹೆಸರಿನಲ್ಲಿ ದಕ್ಷಿಣ ಕನ್ನಡ ಬಿಜೆಪಿಯಿಂದ ವೋಟ್ ಬ್ಯಾಂಕ್ ಯಾತ್ರೆ


ಮಂಗಳೂರು : ನೇತ್ರಾವತಿ ನದಿ ತಿರುವು ಯೋಜನೆಯನ್ನು ವಿರೋಧಿಸಿ ದಕ್ಷಿಣ ಕನ್ನಡ ಬಿಜೆಪಿಯಿಂದ ಜಿಲ್ಲೆಯ ಜನರಿಗೆ  ಮಂಕುಬೂದಿ ಎರಚಲು ರಥ ಯಾತ್ರೆಯನ್ನು ನಡೆಸುತಿದೆ,
ಆಗಸ್ಟ್ 2011ರಿಂದ ಜುಲೈ 2012ರ ತನಕ ಸದಾನಂದ ಗೌಡರು ಮುಖ್ಯಮಂತ್ರಿ ಆಗಿದ್ದಾಗ ಈ  ಯೋಜನೆ ಮಂಜೂರು ಆಗಿದ್ದು, ಅನುದಾನ ಕೂಡ ಬಿಡುಗಡೆ ಆಗಿತ್ತು. ಈ ಸಂದರ್ಭದಲ್ಲಿ ಅಂದಿನ ವಿಧಾನಸಭೆಯ ಬಿಜೆಪಿ ಸದಸ್ಯರಾಗಿದ್ದ ಅಂಗಾರ, ಮಲ್ಲಿಕಾ ಪ್ರಸಾದ್, ಎನ್ ಯೋಗೀಶ್ ಭಟ್ ಮತ್ತು ಅಂದು ಸಚಿವರಾಗಿದ್ದ ಕೃಷ್ಣ ಪಾಲೇಮಾರ್ ಅವರಾಗಲಿ ಸಂಸದರಾಗಿದ್ದ ನಳಿನ್ ಕುಮಾರ್ ಕಟೀಲ್ ಆಗಲಿ ಯಾವುದೇ ರೀತಿಯ ವಿರೋಧ ವ್ಯಕ್ತಪಡಿಸಲೇ ಇಲ್ಲ.ಎತ್ತಿನಹೊಳೆ ಯೋಜನೆಗೆ ಡಿಪಿಆರ್  ತಯಾರಿಸಿದ ಸಂದರ್ಭದಲ್ಲಿ ತುಟಿಪಿಟಿಕ್ ಎನ್ನದ ಸಂಸದ ನಳೀನ್ ಕುಮಾರ್ ಕಟೀಲ್  ಈ ಯೋಜನೆಯ ಬಗ್ಗೆ ಆಸಕ್ತಿಯೇ ತೋರದೆ ಸುಮ್ಮನೆ ಇದ್ದರು.    ನಳಿನ್ ಕುಮಾರ್   ಕಳೆದ ಬಾರಿ ಮತ್ತೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದಾಗ ಎತ್ತಿನಹೊಳೆ ಯೋಜನೆಯೊಂದು ಚುನಾವಣಾ ವಿಚಾರವಾಗಿ ಗೋಚರಿಸಿತು. 2015ರಲ್ಲಿ ಪಾದಯಾತ್ರೆಯೊಂದನ್ನು ಕೈಗೊಂಡ ಕಟೀಲ್ ಅದನ್ನೊಂದು ರಾಜಕೀಯ ಲಾಭದ ವಿಚಾರವಾಗಿ ಸಕ್ರಿಯವಾಗಿರಿಸಿಕೊಂಡಿದ್ದಾರೆ. ದಕ್ಷಿಣ ಕನ್ನಡ ಬಿಜೆಪಿಗೆ  ಕರಾವಳಿಯಲ್ಲಿ ಬಹುದೊಡ್ಡ ಓಟ್ ಬ್ಯಾಂಕ್ ಕಾಮಧೇನುವಾಗಿ ಎತ್ತಿನಹೊಳೆ ಯೋಜನೆ ಪರಿಣಮಿಸಿದೆ.
ದುರಂತವೆಂದರೆ ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಿ ಬಿಜೆಪಿ  ವಿಧಾನ ಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿ ಚರ್ಚೆ ನಡೆಸುವುದಿಲ್ಲ ಸುಖಾ ಸುಮ್ಮನೆ ಚುನಾವಣೆ ಹತ್ತಿರ ಬರುತ್ತಿದ್ದಂತೆ  ತಮ್ಮ ಸರಕಾರವೇ ಆರಂಭಿಸಿದ ಯೋಜನೆಯನ್ನು ವಿರೋಧ ಮಾಡುವ ಮೂಲಕ ವೋಟ್ ಬ್ಯಾಂಕ್ ರಾಜಕೀಯ ಮಾಡುತಿದ್ದಾರೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರುತಿದೆ 

No comments