Breaking News

ಇತಿಹಾಸದಲ್ಲೇ ಮೊದಲ ಬಾರಿಗೆ ಪಾಕ್‌ ಬಾಂಬ್‌ ನಿಷ್ಕ್ರಿಯ ದಳಕ್ಕೆ ಮಹಿಳೆ ಆಯ್ಕೆ


ಪಾಕಿಸ್ತಾನ : ಪಾಕ್‌ ಬಾಂಬ್‌ ನಿಷ್ಕ್ರಿಯ ದಳಕ್ಕೆ ಮೊದಲ ಮಹಿಳೆ  29ರ ಹರೆಯದ ರಫೀಯಾ ಖಾಸೀಂ ಬೇಗ್‌ ಹೊಸ ಶಕೆಗೆ ಕಾರಣಕರ್ತರಾಗಿದ್ದಾರೆ.ಭಯೋತ್ಪಾದಕ ದಾಳಿ ನಡೆಯುವ ಖೈಬರ್‌ ಪಖ್ತುಂಕ್ವಾ ಪ್ರಾಂತ್ಯದ ಬಾಂಬ್‌ ನಿಷ್ಕ್ರಿಯ ದಳವನ್ನು ಸೇರುವ ಮೂಲಕ ಪಾಕಿಸ್ತಾನದಲ್ಲಿ ಬಾರಿ ಸದ್ದು ಮಾಡಿದ್ದಾರೆ .ಏಳು ವರ್ಷಗಳ ಹಿಂದೆ ಕಾನ್‌ಸ್ಟೇಬಲ್‌ ಆಗಿ ಪೊಲೀಸ್‌ ಸೇವೆಗೆ ಸೇರಿದ್ದ ಖಾಸೀಂ ಬೇಗ್‌ ನೌಶೇರಾದ ಸ್ಪೋಟಕಗಳ ನಿಭಾವಣೆ ಶಾಲೆಯಲ್ಲಿ 31 ಮಂದಿ ಇತರ ಪುರುಷ ಸಿಬ್ಬಂದಿ ಜತೆ ತರಬೇತಿ ಪಡೆದ ಬಳಿಕ ಈಗ ಬಾಂಬ್‌ ನಿಷ್ಕ್ರಿಯ ದಳ ಸೇರಲು ಸಜ್ಜಾಗಿದ್ದಾರೆ
source -vk

No comments