ಬೂದಿ ಮುಚ್ಚಿದ ಕೆಂಡದಂತಾದ ಗಂಗಾವತಿ,144 ಸೆಕ್ಷನ್ ಜಾರಿ
ಕೊಪ್ಪಳ :ಅಯ್ಯಪ್ಪ ಸ್ವಾಮಿ ಹಾಗೂ ಹನುಮಂತನ ಭಕ್ತರ ಧ್ವಜ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ಆರಂಭವಾದ ಗಲಾಟೆ ಇದೀಗ ಕೋಮು ಗಲಭೆಯತ್ತ ಮುಖ ಮಾಡಿದೆ .ಜಲ್ಲೆಯ ಗಂಗಾವತಿಯಲ್ಲಿ ಭಾನುವಾರದಂದು ಧ್ವಜ ಕಟ್ಟುವ ಗಲಾಟೆಯಲ್ಲಿ ಅಯ್ಯಪ್ಪ ಸ್ವಾಮಿ ಹಾಗೂ ಹನುಮಂತನ ಭಕ್ತರ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿ,
ಎರಡು ಕೋಮುಗಳ ನಡುವೆ ಘರ್ಷಣೆಯುಂಟಾಗಿತ್ತು .ಇದರಿಂದ ಸಿಟ್ಟಿಗೆದ್ದ ಯುವಕರು ಠಾಣೆಗೆ ಬಂದು ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು. ಈ ಟೈಮ್ನಲ್ಲಿ ಪ್ರತಿಭಟನಾನಿರತ ಹನುಮಮಾಲಾ ಹಾಗೂ ಅಯ್ಯಪ್ಪಮಾಲಾ ಭಕ್ತರ ಮೇಲೆ ಲಾಠಿ ಚಾರ್ಜ್ ನಡೆಸಿದರು.ಸದ್ಯ ಗಂಗಾವತಿ ನಗರದಲ್ಲಿ 144 ಸೆಕ್ಷೆನ್ ಜಾರಿಗೊಳಿಸಲಾಗಿದೆ ಎಂದು ತಿಳಿದು ಬಂದಿದೆ
No comments