Breaking News

ರಸ್ತೆ ಕಾಮಗಾರಿ ಕ್ರೆಡಿಟ್ ಗಿಟ್ಟಿಸಲು ನಳೀನ್ ,ರಮಾನಾಥ್ ರೈ ಬ್ಯಾನರ್ ದೊಂಬರಾಟ


ಮಂಗಳೂರು :  ಕೇಂದ್ರ ಸರಕಾರದ ಬೊಕ್ಕಸದಿಂದ ರಸ್ತೆ  ಬಿ ಸಿ ರೋಡು ಜಂಕ್ಷನ್ನಿನಿಂದ ಗೂಡಿನಬಳಿ, ಪಾಣೆಮಂಗಳೂರು, ನಂದಾವರ ಮಾರ್ಗವಾಗಿ ಮಾರ್ನಬೈಲ್ ಜಂಕ್ಷನ್ನಿನ ರಸ್ತೆ ಅಭಿವೃದ್ದಿಗಾಗಿ 3.5 ಕೋಟಿ ರೂಪಾಯಿ ಅನುದಾನ ಮಂಜೂರು ಆಗಿರುತ್ತದೆ .ಮುಂಬರುವ ಚುನಾವಣೆಯನ್ನು ಗಮನದಲ್ಲಿ ಇತ್ತು ಕೊಂಡು ರಮಾನಾಥ್ ರೈ ಮತ್ತು ನಳೀನ್ ಕುಮಾರ್ ಕಟೀಲ್ ಅವರ ಫ್ಲೆಕ್ಸ್ಗಳು  ಅಲ್ಲಲ್ಲಿ  ರಾರಾಜಿಸುತ್ತಿವೆ .
ಇದು ಕೇಂದ್ರದ ರಸ್ತೆ ಅಭಿವೃದ್ದಿ ನಿಧಿಯಾಗಿರುವುದರಿಂದ ಇದನ್ನು ನಾನೇ ಬಿಡುಗಡೆಗೊಳಿಸಲು ಪ್ರಯತ್ನ ಪಟ್ಟಿದ್ದೇನೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೊಂಡರೆ, ಕ್ಷೇತ್ರದ ಶಾಸಕನಾಗಿ ನಾನೇ ಮಾಡಿಕೊಂಡ ವಿಶೇಷ ಮನವಿ ಮೇರೆಗೆ ಕೇಂದ್ರ ರಸ್ತೆ ನಿಧಿ ನನ್ನ ಕ್ಷೇತ್ರಕ್ಕೆ ಬಿಡುಗಡೆಗೊಂಡಿದೆ ಎಂದು ಸಚಿವ ಬಿ ರಮಾನಾಥ ರೈ ಅವರೂ ಹೇಳಿಕೊಳ್ಳುತ್ತಿದ್ದಾರೆ.

source- karavali ale 

No comments