ಮಾಜಿ ಪಂಚಾಯತ್ ಆದ್ಯಕ್ಷ ಮೈನಾಕರ ಶೆಟ್ಟಿ ಅವರ ತೇಜೋವಧೆಗೆ ಯತ್ನ
ಕಾರ್ಕಳ : ಹಿರ್ಗಾನ ಪಂಚಾಯತ್ ಮಾಜಿ ಆದ್ಯಕ್ಷ ಮೈನಾಕರ ಶೆಟ್ಟಿ ಅವರ ಅಂಗಡಿಯ ಮೇಲೆ ಶನಿವಾರ ಅಬಕಾರಿ ಇಲಾಖಾಧಿಕಾರಿಗಳು ದಾಳಿ ನಡೆಸಿ ಅಕ್ರಮ ಮದ್ಯ ವಶ ಪಡಿಸಿಕೊಂಡಿದ್ದಾರೆ ಎಂದು ಬಿಂಬಿಸಲು ಯತ್ನಿಸಿದ್ದು ಈ ಘಟನೆ ಸತ್ಯಕ್ಕೆ ದೂರವಾಗಿದೆ ಎಂದು ಕಾರ್ಕಳ ಬಿಜೆಪಿ ಮುಖಂಡರು ಸ್ಪಷ್ಟಿಸಿದ್ದಾರೆ . “ಯಾವುದೇ ಅಬಕಾರಿ ವ್ಯವಹಾರಗಳಿಲ್ಲದ ಮೈನಾಕರ ಶೆಟ್ಟಿಯವರ ಮಾನ ಹರಾಜಿಗೆ ಕೆಲ ಪ್ರಭಾವಿಗಳು ಮತ್ತು ಕಾಣದ ಕೈಗಳು ಮದ್ಯ ದಾಸ್ತಾನಿನ ಸುಳ್ಳು ಕೇಸ್ ಹಾಕಿಸಿ ಬಳಿಕ ಮಾಧ್ಯಮಗಳಲ್ಲಿ ಮಾನ ಹರಾಜು ಹಾಕುವ ಕೆಲಸ ಮಾಡಿದ್ದಾರೆ. ಅಬಕಾರಿ ಇಲಾಖಾಧಿಕಾರಿಗಳು ಸತ್ಯಾಸತ್ಯತೆ ಅರಿಯದೇ ರಾಜಕೀಯ ಒತ್ತಡಕ್ಕೆ ಮಣಿದಿದ್ದು ಇದರ ಹಿಂದೆ ಯಾರ ಕೈವಾಡ ಇದೆ?” ಎಂಬುವುದನ್ನು ಇಲಾಖೆ ಸ್ಪಷ್ಟಪಡಿಸುವಂತೆ ಬಿಜೆಪಿ ಒತ್ತಾಯಿಸಿದೆ ಎಂದು ತಿಳಿದು ಬಂದಿದೆ .
No comments