Breaking News

ಸಿದ್ದರಾಮಯ್ಯನವರ ಮೇಲೆ ಕಿಡಿ ಕಾರಿದ ಜನಾರ್ಧನ ಪೂಜಾರಿ


ಮಂಗಳೂರು : ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು ಪತ್ರಿಕಾ ಗೋಷ್ಠಿಯಲ್ಲಿ  ಮುಖ್ಯಮಂತ್ರಿ ಸಿದ್ದರಾಮಯ್ಯನವರ ಕಾರ್ಯವೈಖರಿ ಬಗ್ಗೆ ತೀವ್ರ ತರಾಟೆಗೆ ತೆಗೆದು ಕೊಂಡು ಮಾತಾಡಿದ ಜನಾರ್ಧನ ಪೂಜಾರಿ   ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡ ಅಬಕಾರಿ ಸಚಿವ ಎಚ್ ವೈ ಮೇಟಿ ಅವರ ಮೇಲೆ ಹೊರಲಾಗಿರುವ ರಾಸ ಲೀಲೆ ಪ್ರಕರಣಕ್ಕೆ  ಸಂಬಂಧಿಸಿದಂತೆ ಮುಖ್ಯ ಮಂತ್ರಿ  ಅವರು ಈ ಕೂಡಲೇ ಸಚಿವರ ರಾಜೀನಾಮೆ ಪಡೆಯಬೇಕು ಒಂದು ವೇಳೆ ಅವರು ರಾಜೀನಾಮೆ ನೀಡಲು  ನಿರಾಕರಿಸಿದರೆ, ಸಚಿವ ಸಂಪುಟದಿಂದ ಅವರನ್ನು  ಕಿತ್ತೊಗೆಯಬೇಕು ಎಂದು ಪೂಜಾರಿ  ಒತ್ತಾಯಿಸಿದರು .ಸಿದ್ದರಾಮಯ್ಯನವರ ಮೇಲೆ ಟೀಕಾ ಪ್ರಹಾರವನ್ನು ಮುಂದುವರೆಸುತ್ತಾ ರಾಜ್ಯದ ಮುಖ್ಯಮಂತ್ರಿಯಾಗಿ ನೀವು ಜನರಿಗೆ ಸೂಕ್ತವಾದ ಉತ್ತರ ನೀಡಬೇಕಿದೆ ಸಾಧ್ಯವಾಗದೆ ಹೋದರೆ ನೀವು ಮುಖ್ಯ ಮಂತ್ರಿ ಕುರ್ಚಿಯಲ್ಲಿ ಕುಳಿತು ಕೊಳ್ಳಲು  ಅನರ್ಹರು ,ಸಮಯ ಮೀರುವ ಮುಂಚೆ  ಅಬಕಾರಿ ಸಚಿವರನ್ನು ಕಿತ್ತೊಗೆಯಬೇಕು ಎಂದು ಆಗ್ರಹಿಸಿದರು


No comments