ಶಿರ್ವ ಚರ್ಚ್ ದಾಳಿ ಬೆನೆಡಿಕ್ಟ್ ಡಿಸೋಜಾ ಬಂಧನ
ಉಡುಪಿ : ಶಿರ್ವ ಚರ್ಚ್ ನಲ್ಲಿ ಪ್ರತಿಮೆಗಳನ್ನು ದ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ .ಆರೋಪಿಯನ್ನು ಶಿರ್ವ ಸೊಸೈಟಿಯ ಹತ್ತಿರದ ನಿವಾಸಿ ಬೆನೆಡಿಕ್ಟ್ ಡಿಸೋಜ (57) ಎಂದು ಗುರುತಿಸಲಾಗಿದೆ .ಕುಡಿದ ಮತ್ತಿನಲ್ಲಿ ಈ ಕೃತ್ಯವನ್ನು ಎಸಗಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾರೆ .ಘಟನೆ ನಡೆದ ಭಾನುವಾರ ಬೆಳಗ್ಗೆ ಇವರು ವಾಸಿಸುವ ಹತ್ತಿರದಲ್ಲಿ ಹೊರ ರಾಜ್ಯದ ಕಾರ್ಮಿಕರೊಂದಿಗೆ ಜಗಳ ಮಾಡಿದ್ದರು ,ನಂತರ ಹತಾಶೆಯಿಂದ ಮತ್ತಿನ ಅಮಲಿನಲ್ಲಿ ಶಿರ್ವ ಚರ್ಚಿಗೆ ಬಂದಿದ್ದರು ನಂತರ ಹತಾಶೆಯಿಂದ ಸೇಂಟ್ ಆಂಥೋನಿ ಮತ್ತು ಸೇಂಟ್ ಲಾರೆನ್ಸ್ ಪ್ರತಿಮೆಗಳ ಸ್ಥಾನಗಳನ್ನು ಬದಲಿಸಲು ಪ್ರಯತ್ನಿಸಿದರು ಈ ಸಂದರ್ಭದಲ್ಲಿ ಸೇಂಟ್ ಆಂಟನಿ ಪ್ರತಿಮೆ ಕೆಳಗೆ ಬಿದ್ದು ಪುಡಿಯಾಗಿ ಸ್ಥಳದಿಂದ ಕಾಲು ಕಿತ್ತಿದ್ದರು. ವೃತ್ತಿಯಲ್ಲಿ ಚಾಲಕನಾಗಿರುವ ಅವರ ಪತ್ನಿ ಮತ್ತು ಮಗಳು ವಿದೇಶದಲ್ಲಿದ್ದಾರೆ ಎಂದು ತಿಳಿದು ಬಂದಿದೆ .
ಶಿರ್ವ ಚರ್ಚ್ ದಾಳಿ ಸಂಬಂಧಿಸಿ ಶಿರ್ವ ಪ್ಯಾರಿಷ್ ಗ್ರಾಮೀಣ ಕೌನ್ಸಿಲ್ ಪೊಲೀಸರಿಗೆ ಮೂರು ದಿನಗಳ ಗಡುವು ನೀಡಿತ್ತು ,ಮತ್ತು ಘಟನಾ ಸ್ಥಳಕ್ಕೆ ಅನೇಕ ರಾಜಕೀಯ ನಾಯಕರು ಮತ್ತು ಬಿಷಪ್ ಡಾ ಜೆರಾಲ್ಡ್ ಲೋಬೊ ಭೇಟಿ ನೀಡಿದ್ದರು ಮತ್ತು ಶೀಘ್ರ ಕ್ರಮಕ್ಕೆ ಒತ್ತಾಯಿಸಿದ್ದರು .
ಈ ಹಿಂದಿನ ವರದಿ
ಉಡುಪಿ : ಶಿರ್ವ ಚರ್ಚ್ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿ ಪ್ರತಿಮೆಗಳನ್ನು ದ್ವಂಸ ಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ. ಘಟನೆ ಸರಿ ಸುಮಾರು ಮಧ್ಯಾಹ್ನ 1ರಿಂದ 3.30 ಗಂಟೆಗೆ ನಡೆದಿದೆ ಎಂದು ಅಂದಾಜಿಸಲಾಗಿದೆ. ದುಷ್ಕರ್ಮಿಗಳು ಸೇಂಟ್ ಆಂಟನಿ ಪ್ರತಿಮೆ ಸಂಪೂರ್ಣವಾಗಿ ಚೂರುಚೂರಾಗಿ ಮಾಡಿ ಸೇಂಟ್ ಲಾರೆನ್ಸ್ ಪ್ರತಿಮೆ ಸ್ಥಳಾಂತರಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ .ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಭರವಸೆ ನೀಡಿ ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ
No comments