ಅಪ್ರಾಪ್ತೆ ಬಾಲಕಿಯ ಮೇಲೆ ಶಿಕ್ಷಕನಿಂದ ಲೈಂಗಿಕ ದೌರ್ಜನ್ಯ
ಬೆಂಗಳೂರು:ಖಾಸಗಿ ಶಾಲೆಯ ಗಣಿತ ಶಿಕ್ಷಕನೊಬ್ಬ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ನಡೆದಿದೆ .ಆರೋಪಿ ಇಲಿಯಾಸ್ ನಗರದ ಹಾರೋನ್ ಪಾಷಾ (28) ಬಂಧಿತ .ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲು ಆರೋಪಿಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ ಎಂದು ತಿಳಿದು ಬಂದಿದೆ .
ಘಟನೆಯ ವಿವರ
.ಕುಮಾರಸ್ವಾಮಿ ಲೇಔಟ್ ಠಾಣಾ ವ್ಯಾಪ್ತಿಯ ಖಾಸಗಿ ಶಾಲೆಯೊಂದರಲ್ಲಿ ಗಣಿತ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಈ ವೇಳೆ 10ನೇ ತರ ವಿದ್ಯಾರ್ಥಿನಿಯ ಜೊತೆ ಸಲುಗೆಯಿಂದ ನಡೆದುಕೊಳ್ಳುತ್ತಿದ್ದ. ಬಳಿಕ ಪಾಠ ಹೇಳಿಕೊಡುವುದಾಗಿ ತರಗತಿಯಲ್ಲಿ ಒಬ್ಬಳನ್ನೇ ಕೂರಿಸಿಕೊಂಡು ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದ. ದಿನ ಕಳೆದಂತೆ ಪ್ರೀತಿಸುತ್ತಿರುವುದಾಗಿ ಬಾಲಕಿಗೆ ಹೇಳಿದ್ದ. ಆಕೆ ನಿರಾಕರಿಸಿದಾಗ ಕ್ಷಮೆ ಕೇಳಿ ಸುಮ್ಮನಿದ್ದ. ಮತ್ತೆ ಕೆಲ ದಿನಗಳ ಬಳಿಕ ಪ್ರೀತಿ ನಿವೇದಿಸಿದ್ದ. ಈ ವೇಳೆ ಆಕೆ ಶಾಲೆಯ ಮುಖ್ಯಸ್ಥರ ಗಮನಕ್ಕೆ ತಂದಿದ್ದರು. ಈ ವೇಳೆ ಆತನನ್ನು ಶಾಲೆಯಿಂದ ತೆಗೆದು ಹಾಕಲಾಗಿತ್ತು.
ಕೆಲ ತಿಂಗಳು ನಾಪತ್ತೆಯಾಗಿದ್ದ ಆರೋಪಿಯು ಮತ್ತೆ ಶಾಲೆ ಬಳಿ ಬಂದು ಬಾಲಕಿಯ ಬಳಿ ಕ್ಷಮೆ ಕೇಳಿದ್ದ. ಹೆಚ್ಚು ಅಂಕಗಳಿಸಲು ಸಹಾಯವಾಗುವಂತೆ ಪಾಠ ಮಾಡುವುದಾಗಿ ಆಕೆಯ ಜೊತೆ ಮಾತನಾಡಲು ಆರಂಭಿಸಿದ್ದ. ಹೀಗೆ ಒಂದು ದಿನ ಕಾಫಿ ಕುಡಿಯುವ ನೆಪವೊಡ್ಡಿ ಬಾಲಕಿಯನ್ನು ಜಯನಗರದ ಹೋಟೆಲ್‌ವೊಂದಕ್ಕೆ ಕರೆದೊಯ್ದು ಪಾನೀಯದಲ್ಲಿ ಮತ್ತುಬರುವ ಮಾತ್ರೆ ಬರೆಸಿ ಕುಡಿಸಿದ್ದ. ಬಳಿಕ ರೂಮ್ ಕರೆದೊಯ್ದು ಲೈಂಗಿಕ ದೌರ್ಜನ್ಯ ನಡೆಸಿದ್ದ. ಬಳಿಕ ಮನೆಗೆ ತೆರಳಿದ್ದ ಬಾಲಕಿ ತಂದೆಗೆ ಘಟನೆ ಕುರಿತು ವಿವರಿಸಿದ್ದು, ತಂದೆ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ.
No comments