ಮಕ್ಕಳ ಮಾರಾಟ ಜಾಲ, ಮೈಸೂರಿನ ನಸೀಮ ಆಸ್ಪತ್ರೆಗೆ ಬೀಗ ಜಡಿದ ಮೈಸೂರು ಪೋಲೀಸರು.
ಮೈಸೂರು : ಮಕ್ಕಳ ಮಾರಾಟ ದಂದೆಯ ಮೂಲಕ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮೈಸೂರಿನ ನಸೀಮ ಆಸ್ಪತ್ರೆಗೆ ಮೈಸೂರು ಪೋಲೀಸರು ಬೀಗ ಜಡಿದಿದ್ದಾರೆ. ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ಮತ್ತೊಂದು ಆಸ್ಪತ್ರೆ 'ಅರವಿಂದ್'ಗೂ ಕೂಡ ನೋಟೀಸನ್ನು ನೀಡಲಾಗಿದೆ ಎಂದು ಮೈಸೂರು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ರವಿ ಚೆನ್ನಣ್ಣನವರ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ರವಿ ಚೆನ್ನಣ್ಣನವರ್ ಈ ವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿಯನ್ನು ಬಂಧಿಸಲಾಗಿದ್ದು, ಮಾರಾಟ ಮಾಡಲಾಗಿದ್ದ 16 ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಇಬ್ಬರು ಮಕ್ಕಳ ರಕ್ಷಣೆ ಮಾಡಬೇಕಾಗಿದ್ದು, ಇದರಲ್ಲಿ ಒಂದು ಮಗು ಪ್ರಕರಣದ ಪ್ರಮುಖ ಆರೋಪಿ ಉಷಾ ಸಹೋದರಿ ಸಿರಿನ್ ಜೊತೆ ಯುಎಸ್ಎ'ನಲ್ಲಿದೆ, ಮತ್ತೊಂದು ಮಗು ಮೈಸೂರಿನಲ್ಲಿದೆ. ಎರಡೂ ಮಕ್ಕಳನ್ನು ಆದಷ್ಟು ಬೇಗ ರಕ್ಷಣೆ ಮಾಡಲಾಗುವುದು ಎಂದಿದ್ದಾರೆ.
No comments