Breaking News

ನೋಟ್ ಬ್ಯಾನ್ ಬಡವರ ಮೇಲಿನ ದಾಳಿ: ರಾಹುಲ್ ಗಾಂಧಿ


ನವದೆಹಲಿ :ನೋಟ್ ಬ್ಯಾನ್ ನಿರ್ಧಾರ ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ವಿಪಕ್ಷಗಳು ಸಭೆ ನಡೆಸಿದ್ದು,  ದೆಹಲಿಯಲ್ಲಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ನೇತೃತ್ವದಲ್ಲಿ ಸಭೆ ಆರಂಭವಾಗಿದೆ. ಸಭೆಯಲ್ಲಿ ಟಿಎಂಸಿ, ಆರ್ ಜೆಡಿ, ಡಿಎಂಕೆ ,ಜೆಡಿಎಸ್, ಐಎನ್ ಸಿ, ಜೆ ಎಂಎಂ, ಐಯು ಎಂಎಲ್ ಮೊದಲಾದ ಪಕ್ಷಗಳು ಭಾಗಿಯಾಗಿವೆ.
ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, ನೋಟ್ ಬ್ಯಾನ್ ಬಡವರ ಮೇಲೆ ಸರ್ಕಾರ ನಡೆಸಿದ ದಾಳಿಯಾಗಿದೆ. ಪ್ರಧಾನಿ ಕ್ರಮದಿಂದ ಬಡವರ ಸ್ಥಿತಿ ಹೀನಾಯವಾಗಿದೆ. ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ದೇಶದಲ್ಲಿನ ಬಡವರು, ರೈತರು, ಕೂಲಿಕಾರ್ಮಿಕರು, ಸಣ್ಣ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ ಎಂದರು.
ನೋಟ್ ಬ್ಯಾನ್ ಜಾರಿಗೆ ಬಂದ ನ 8ರಿಂದ ಇಂದಿನವರೆಗೂ ದೇಶಾದ್ಯಂತ ಒಂದೆ ಸ್ಥಿತಿಯಿದೆ. ಗೊಂದಲದ ಪರಿಸ್ಥಿತಿ ಬದಲಾಗಿಲ್ಲ, ಜನರಿಗೆ ನೆಮ್ಮದಿ ಸಿಕ್ಕಿಲ್ಲ. ನೋಟ್ ಬ್ಯಾನ್ ಕ್ರಮ ಎಲ್ಲಾ ರೀತಿಯಲ್ಲೂ ವಿಫಲವಾಗಿದೆ ಎಂದು ಗುಡುಗಿದ್ದಾರೆ.
ನೋಟು ನಿಷೇಧ ಕ್ರಮ ದೇಶದಲ್ಲಿಯೇ ಅತಿದೊಡ್ಡ ಹಗರಣವಾಗಿದೆ. ನಾನು ಪ್ರಧಾನಿ  ಮೋದಿ ವಿರುದ್ಧ ಭ್ರಷ್ಟಾಚಾರ ಆರೊಪ ಮಾಡಿದ್ದೆ. ಸಹರಾ ಕಂಪನಿಯಿಂದ ಲಂಚ ಪಡೆದಿರುವುದಾಗಿ ಹೇಳಿದ್ದೆ. ಮೋದಿ ಬ್ರಷ್ಟಾಚಾರದ ಬಗ್ಗೆ ದಾಖಲೆಗಳನ್ನೂ ತೋರಿಸಿದ್ದೇನೆ. ಆದಾಗ್ಯೂ ಈ ಬಗ್ಗೆ ಪ್ರಧಾನಿ ಯಾವುದೇ ಉತ್ತರ ನೀಡಿಲ್ಲ. ಪ್ರಧಾನಿ ದೇಶದ ಜನಗೆ ಮೊದಲು ಉತ್ತರ ನೀಡಬೇಕು. ಸ್ವಂತ ಭ್ರಷ್ಟಾಚರದ ಬಗ್ಗೆ ಮೋದಿ ಮೌನವೇಕೆ ಎಂದು ಪ್ರಶ್ನಿಸಿದರು.

No comments