Breaking News

ಕಂಪನಿಗಳಲ್ಲಿ ಚಿನ್ನ ದಾಸ್ತಾನು ಪ್ರಮಾಣ ಹೆಚ್ಚಳ


ಕೊಚ್ಚಿನ್: ಕೇರಳದ ಮೂರು ಅತಿದೊಡ್ಡ ಚಿನ್ನದ ಸಾಲ ಕಂಪೆನಿಗಳ ಚಿನ್ನ ದಾಸ್ತಾನು ಪ್ರಮಾಣ ಎರಡು ವರ್ಷಗಳ ಹಿಂದೆ 195 ಟನ್ ಇದ್ದುದು ಇದೀಗ 2016ರ ಸೆಪ್ಟೆಂಬರ್ ವೇಳೆಗೆ 263 ಟನ್‍ಗಳಿಗೆ ಹೆಚ್ಚಿದೆ. ಈ ಪ್ರಮಾಣ ಜಗತ್ತಿನ ಕೆಲ ಶ್ರೀಮಂತ ದೇಶಗಳಲ್ಲಿ ಇರುವ ಚಿನ್ನದ ಒಟ್ಟು ದಾಸ್ತಾನಿಗಿಂತಲೂ ಅಧಿಕ ಎನಿಸುವ ಬೆಚ್ಚಿ ಬೀಳಿಸುವ ಅಂಶ ಇದೀಗ ಬಹಿರಂಗವಾಗಿದೆ.
ಮುತ್ತೂಟ್ ಪೈನಾ£್ಸï, ಮಣಪ್ಪುರಂ ಫೈನಾ£್ಸï ಹಾಗೂ ಮುತ್ತೂಟ್ ಫಿನ್ಕಾರ್ಪ್ ಸಂಸ್ಥೆಗಳ ಒಟ್ಟು ಚಿನ್ನ ದಾಸ್ತಾನು 263 ಟನ್ ಆಗಿದ್ದು, ಇದು ಬೆಲ್ಜಿಯಂ, ಸಿಂಗಾಪುರ, ಸ್ವೀಡನ್ ಅಥವಾ ಆಸ್ಟ್ರೇಲಿಯಾ ದೇಶಗಳು ಹೊಂದಿರುವ ಚಿನ್ನದ ದಾಸ್ತಾನಿಗಿಂತ ಅಧಿಕ.
ವಿಶ್ವದ ಚಿನ್ನದ ಬೇಡಿPಯಲ್ಲಿ ಬಾರತದ ಪಾಲು ಶೇಕಡ 30 ಆಗಿದೆ. ಕೇರಳದಲ್ಲಿ ಚಿನ್ನಾಭರಣ ತಯಾರಿಕಾ ಉದ್ಯಮದಲ್ಲೇ ಎರಡು ಲಕ್ಷಕ್ಕಿಂತಲೂ ಅಧಿಕ ಮಂದಿ ತೊಡಗಿಸಿಕೊಂಡಿದ್ದಾರೆ.
ಮುತ್ತೂಟ್ ಪೈನಾನ್ಸ್‍ನ ಚಿನ್ನ ದಾಸ್ತಾನು ಎರಡು ವರ್ಷಗಳಲ್ಲಿ 116 ಟನ್‍ನಿಂದ 150 ಟನ್‍ಗೆ ಏರಿಕೆಯಾಗಿದೆ. ಸಿಂಗಾಪುರ 127.4 ಟನ್ ಚಿನ್ನ ಹೊಂದಿದ್ದರೆ, ಸ್ವೀಡನ್ 125.7 ಟನ್, ಆಸ್ಟ್ರೇಲಿಯಾ 79.9 ಟನ್, ಕುವೈತ್ 79 ಟನ್, ಡೆನ್ಮಾರ್ಕ್ 66.5 ಟನ್ ಹಾಗೂ ಫಿನ್ಲೆಂಡ್ 49.1 ಟನ್ ಚಿನ್ನ ಹೊಂದಿವೆ. ಮುತ್ತೂಟ್ ಫೈನಾ£್ಸï 65.9 ಟನ್ ಚಿನ್ನ ಹೊಂದಿದ್ದರೆ, ಮುತ್ತೂಟ್ ಫಿನ್ಕಾರ್ಪ್ 46.88 ಟನ್ ಚಿನ್ನ ಹೊಂದಿದೆ. ಇವುಗಳ ಒಟ್ಟು ಚಿನ್ನ ದಾಸ್ತಾನು ಪ್ರಮಾಣ 262.78 ಟನ್. 
ವಿಶ್ವ ಚಿನ್ನದ ಮಂಡಳಿ ಗರಿಷ್ಠ ಚಿನ್ನ ಹೊಂದಿರುವ ಸಂಸ್ಥೆಗಳ ಪೈಕಿ ಮೂರನೆ ಸ್ಥಾನದಲ್ಲಿದ್ದು, 558 ಟನ್ ಚಿನ್ನ ಹೊಂದಿದೆ. ಅಮೆರಿಕ ಅಗ್ರಸ್ಥಾನಿಯಾಗಿದ್ದು, 8,134 ಟನ್, ಜರ್ಮನಿ ಹಾಗೂ ಐಎಂಎಫ್ ಕ್ರಮವಾಗಿ ,378 ಟನ್ ಮತ್ತು 2,814 ಟನ್ ಚಿನ್ನ ದಾಸ್ತಾನು ಹೊಂದಿವೆ.

No comments