ಬರ ಅಧ್ಯಯನ ತಂಡದಲ್ಲಿ ಈಶ್ವರಪ್ಪಗಿಲ್ಲ ಸ್ಥಾನ!
ಬೆಂಗಳೂರು-ರಾಜ್ಯದಲ್ಲಿ ಬರಗಾಲ ಆವರಿಸಿರುವ ಹಿನ್ನೆಲೆ, ರಾಜ್ಯ ಬಿಜೆಪಿ ರಾಜ್ಯಾಧ್ಯಂತ ಬರ ಪ್ರವಾಸ ಅಧ್ಯಯನ ನಡೆಸಲು ಮುಂದಾಗಿದ್ದು, ಇದಕ್ಕೆ ಮೂರು ತಂಡಗಳನ್ನ ರಚಿಸಿದೆ. ಆದರೆ ಈ ತಂಡದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪಗೆ ಸ್ಥಾನ ನೀಡದಿರುವುದು ಕುತೂಹಲ ಮೂಡಿದೆ.
ಜನವರಿಗೆ 22ರವರೆಗೆ ರಾಜ್ಯ ಬಿಜೆಪಿ ಬರ ಅಧ್ಯಯನ ಪ್ರವಾಸ ಕೈಗೊಳ್ಳಲಿದ್ದು, ಇದಕ್ಕೆ ಮೂರು ತಂಡ ರಚಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ, ವಿಧಾನಸಭೆ ವಿಪಕ್ಷ ನಾಯಕ ಜಗದಿಶ್ ಶೆಟ್ಟರ್, ಹಾಗೂ ಮಾಜಿ ಡಿಸಿಎಂ ಆರ್.ಅಶೋಕ್ ನೇತೃತ್ವದಲ್ಲಿ ತಂಡ ರಚಿಸಲಾಗಿದ್ದು,ಇದರಲ್ಲಿ ಪರಿಷತ್ ವಿಪಕ್ಷ ನಾಯಕ ಕೆ.ಎಸ್ ಈಶ್ವರಪ್ಪಗೆ ಸ್ಥಾನ ನೀಡಿಲ್ಲ.
ಕೆಎಸ್ ಈಶ್ವರಪ್ಪ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ಸ್ಥಾಪಿಸಿ ಬಿಎಸ್ ಯಡಿಯೂರಪ್ಪ ಕೆಂಗಣ್ಣಿಗೆ ಗುರಿಯಾಗಿದ್ದು,ಇಬ್ಬರ ನಡುವೆ ಶೀತಲ ಸಮರವೇರ್ಪಟ್ಟಿದೆ. ಇದೇ ವೇಳೆ ಕೆಎಸ್ ಈಶ್ವರಪ್ಪಗೆ ಬರಅದ್ಯಯನ ತಂಡದಲ್ಲಿ ಸ್ಥಾನವಿಲ್ಲದಿರುವುದು ಮತ್ತಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಈ ಕುರಿತು ಪ್ರತಿಕ್ರಿಯಿಸಿದರುವ ಕೆಎಸ್ ಈಶ್ವರಪ್ಪ, ಬರ ಅಧ್ಯಯನ ತಂಡದಿಂದ ಕೋಕ್ ನೀಡಿರುವುದಕ್ಕೆ ನನಗೆ ಬೇಸರವಿಲ್ಲ. ಹಿಂದೆ ನಾನೂ ಸಹ ಹಲವು ಜಿಲ್ಲೆಗಳಲ್ಲಿ ಬರ ಅಧ್ಯಯನ ನಡೆಸಿ ಅಧಿಕಾರಿಗಳ ಜತೆ ಚರ್ಚಿಸಿದ್ದೇನೆ ಎಂದು ಸ್ಪಷ್ಠನೆ ನೀಡಿದರು.
No comments