Breaking News

ಜನರಿಗೆ ತೆರಿಗೆ ಭಾಗ್ಯ: ಅಶೋಕ್ ವ್ಯಂಗ್ಯ


ಬೆಂಗಳೂರು: ಹಲವು ಭಾಗ್ಯಗಳನ್ನು ಜನರಿಗೆ ನೀಡಿರುವ ರಾಜ್ಯಸರ್ಕಾರ ಕಸದ ಮೇಲೆ ಸೆಸ್ ವಿಧಿಸುವ ಮೂಲಕ ರಾಜಧಾನಿ ಜನತೆಗೆ ತೆರಿಗೆ ಭಾಗ್ಯ ನೀಡಿದೆ ಎಂದು ಬಿಜೆಪಿ ಮುಖಂಡ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ಕಳೆದ ಒಂದು ವರ್ಷಗಳ ಅವಧಿಯಲ್ಲಿ ವಿದ್ಯುತ್, ಮನೆ ಮೇಲೆ ತೆರಿಗೆ ಸೇರಿದಂತೆ ವಿವಿಧ ರೀತಿಯ ತೆರಿಗೆ ಭಾಗ್ಯಗಳನ್ನು ವಿಧಿಸಿತ್ತು. ಇದೀಗ ಕಸದ ಮೇಲೆ ಸೆಸ್ ಹೇರಲು ಹೊರಟಿದೆ. ಕೂಡಲೇ ಇದನ್ನು ಹಿಂಪqಯಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಅವರು ಒತ್ತಾಯಿಸಿದ್ದಾರೆ.
ಸರ್ಕಾರ ಪದೇ ಪದೇ ತೆರಿUಯನ್ನು ಹೆಚ್ಚಳ ಮಾಡಿ  ಬೆಂಗಳೂರಿನ ಜನತೆಗೆ ಶಾಕ್ ಮೇಲೆ ಶಾಕ್ ನೀಡುತ್ತಿದೆ. ಈಗ ಕಸದ ಮೇಲೆ ಸೆಸ್ ವಿಧಿಸುವುದು ಅವೈಜ್ಞಾನಿಕ ಪ್ರಕ್ರಿಯೆಯಾಗಿದ್ದು, ನಗರದ ಜನರ ಮೇಲೆ  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಯಾಕೆ ಇಷ್ಟು ಕೋಪ ಎಂದು ಪ್ರಶ್ನಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಒಂದು ಸಾವಿರ ಚದರಡಿಗೆ  10 ರೂ., 1 ರಿಂದ 3 ಸಾವಿರ ಚದರಡಿಗೆ 30 ರೂ., 3 ಸಾವಿರಕ್ಕಿಂತ ಮೇಲ್ಪಟ್ಟ  ಚದರಡಿಗೆ 50 ರೂ. ಸೆಸ್ ವಿಧಿಸಿದ್ದರು ಎಂದು ತಿಳಿಸಿದರು.
ವಿದ್ಯುತ್, ನೀರಾವರಿ ತೆರಿಗೆ ಹೆಚ್ಚಳ ಮಾಡಿದ ಮೇಲೆ ಪುನಃ ಕಸದ ಮೇಲೆ ತೆರಿಗೆ ಹೆಚ್ಚಳ ಮಾಡಿರುವುದು ಸರಿಯಲ್ಲ. ರಾಜ್ಯಸರ್ಕಾರ ಇದನ್ನು ಹಿಂಪqಯದಿದ್ದರೆ ಬಿಬಿಎಂಪಿ ಕೌನ್ಸಿಲ್ ಮುಂಭಾಗ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.

No comments