Breaking News

ಮಲಿನ ನಗರಗಳಲ್ಲಿ ಬೆಂಗಳೂರು ಸೇರ್ಪಡೆ!



ಬೆಂಗಳೂರು: ಉದ್ಯಾನ ನಗರಿ, ಸಿಲಿಕಾನ್ ವ್ಯಾಲಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ರಾಜಧಾನಿ ಬೆಂಗಳೂರು ದೇಶದಲ್ಲಿ ಅತ್ಯಂತ ಮಲಿನಗೊಳ್ಳುತ್ತಿರುವ ನಗರಗಳಲ್ಲಿ ಒಂದು. ನಗರದಲ್ಲಿ ನಾವು ಉಸಿರಾಡುವ ಗಾಳಿ ಹೆಚ್ಚಿನ ಪ್ರಮಾಣದಲ್ಲಿ ಮಲಿನಗೊಂಡಿದ್ದು, ವಾಯುಗಾಮಿ ಪ್ರಮಾಣ ಹೆಚ್ಚಾಗಿದ್ದು, ಸಲ್ಫರ್ ಡೈ ಆಕ್ಸೈಡ್ ಪ್ರಮಾಣ ಕಡಿಮೆಯಾಗಿದೆ ಎಂದು ಸಮೀP್ಷÁ ವರದಿಯೊಂದು ತಿಳಿಸಿದೆ.
2006 ರಿಂದ 2013ರವರೆಗೆ ನಡೆಸಿದ ಸಮೀಕ್ಷೆ ಪ್ರಕಾರ, ಬೆಂಗಳೂರಿನ ಆರು ಕಡೆಗಳಲ್ಲಿ ವಾಯುಮಾಲಿನ್ಯ ಹೆಚ್ಚಳವಾಗಿದೆ. ವೈಟ್ ಫೀಲ್ಡ್ ರಸ್ತೆ, ಕೆಹೆಚ್‍ಬಿ ಕೈಗಾರಿಕಾ ಪ್ರದೇಶ, ಯಲಹಂಕ, ಪೀಣ್ಯ ಕೈಗಾರಿಕಾ ಪ್ರದೇಶ, ವಿಕ್ಟೋರಿಯಾ ಆಸ್ಪತ್ರೆ, ಚಾಮರಾಜ ಪೇಟೆ, ಮೈಸೂರು ರಸ್ತೆ, ಯಶವಂತಪುರ ಸೇರಿದಂತೆ ಹಲವು ಸೂಕ್ಷ್ಮ ಪ್ರದೇಶದಲ್ಲಿ ವಾಯುಮಾಲಿನ್ಯ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ.
ಕೆಹೆಚ್‍ಬಿಯಲ್ಲಿ ಶೇ.216, ವಿಕ್ಟೋರಿಯಾ ಆಸ್ಪತ್ರೆ ಶೇ.119, ವೈಆರ್‍ಪಿಯಲ್ಲಿ ಶೇ.80.3ರಷ್ಟು, ಪೀಣ್ಯದಲ್ಲಿ ಶೇ.76.5ರಷ್ಟು ವಾಯುಗಾಮಿ ಕಣಗಳು ಏರಿಕೆಯಾಗಿವೆ. ಬೆಂಗಳೂರಿನಲ್ಲಿ ವಾಯುಮಾಲಿನ್ಯ ಹೆಚ್ಚಳಕ್ಕೆ ಪ್ರಮುಖ ಕಾರಣ ವಾಹನಗಳ ಸಂಖ್ಯೆ ಹೆಚ್ಚಳವಾಗಿರುವುದು.
ವಾಹನಗಳಿಂದ ಶೇ.42, ರಸ್ತೆಯ ಧೂಳಿನಿಂದ ಶೇ.20, ಕಟ್ಟಡ ತ್ಯಾಜ್ಯದಿಂದ ಶೇ.20 ಕೈಗಾರಿಕೆ ಮತ್ತು ಕಸವನ್ನು ಸುಡುವುದು ಸೇರಿದಂತೆ ಹಲವು ಮೂಲಗಳಿಂದ ಶೇ.18ರಷ್ಟು ಪಾಲು ನಗರದಲ್ಲಿ ಮಾಲಿನ್ಯ ಹೆಚ್ಚಳವಾಗುತ್ತಿದೆ. ಒಟ್ಟಿನಲ್ಲಿ ಬೆಂಗಳೂರಿನಲ್ಲಿ ವಾಯುಮಾಲಿನ್ಯ ಗಣನೀಯ ಪ್ರಮಾಣಲ್ಲಿ ಹೆಚ್ಚಳವಾಗಿದ್ದು, ಶೀಘ್ರದಲ್ಲಿಯೇ ಮಾಲಿನ್ಯ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಅಗತ್ಯವಿದೆ.

No comments