Breaking News

ರಾಜ್ಯದಲ್ಲಿ ರೈಫಲ್ ಶೂಟಿಂಗ್ ರೇಂಜ್ ಸ್ಥಾಪನೆ: ಸಚಿವ ಪ್ರಮೋದ್ ಮಧ್ವರಾಜ್


ಬೆಂಗಳೂರು: ಕ್ರೀಡಾಕೂಟಗಳ ಅನುಕೂಲಕ್ಕಾಗಿ ರಾಜ್ಯದಲ್ಲೇ ರೈಫಲ್ ಶೂಟಿಂಗ್ ರೇಂಜ್ ಸ್ಥಾಪಿಸುವುದಾಗಿ ಮೀನುಗಾರಿಕೆ ಮತ್ತು ಯುವ ಸಬಲೀಕರಣ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಮೀನುಗಾರಿಕೆ ಯುವ ಸಬಲೀಕರಣ ಸಹಯೋಗದಲ್ಲಿ ಆಯೋಜಿಸಿದ ಮೊದಲ ಜನಮನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಾಕೇಶ್ ಎಂಬುವರು ರೈಫಲ್ ಶೂಟಿಂಗ್ ತರಬೇತಿಗೆ ಇರುವ ಸಮಸ್ಯೆಗಳ ಬಗ್ಗೆ ಗಮನ ಸೆಳೆದಾಗ ರಾಜ್ಯದಲ್ಲೇ ಶೂಟಿಂಗ್ ರೇಂಜ್ ಸ್ಥಾಪಿಸುವುದಾಗಿ ಭರವಸೆ ನೀಡಿದರು.
ಅಂತಾರಾಷ್ಟ್ರೀಯ ರಾಜ್ಯದ ಮೊದಲ ರೈಫಲ್ ಶೂಟರ್ ರಾಕೇಶ್ ಮಾತನಾಡಿ, ಸೇನೆಗೆ ವಾರ್ಷಿಕ 50 ಸಾವಿರ ಗುಂಡು ಬಳಸಲು ಅವಕಾಶವಿದ್ದರೆ ಕ್ರೀಡಾಪಟುಗಳಿಗೆ 15 ಸಾವಿರ ಗುಂಡು ಬಳಸಲು ಅವಕಾಶವಿದೆ ಎಂದರು.
ಅಲ್ಲದೆ, ಕ್ರೀಡಾ ಇಲಾಖೆಯಿಂದ 8 ಲಕ್ಷ ರೂ.ವರೆಗೂ ನೆರವು ದೊರೆತಿದೆ. ಆದರೆ, 30 ಲಕ್ಷ ರೂ.ವರೆಗೂ ವೆಚ್ಚವಾಗುತ್ತದೆ ಎಂದು ತಿಳಿಸಿದರು.
ಮುಂದಿನ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ರಾಜ್ಯದ ಚಿನ್ನ ಪಡೆದ ಕ್ರೀಡಾಪಟುಗೆ 5 ಕೋಟಿ, ಬೆಳ್ಳಿ ಪಡೆದ ಕ್ರೀಡಾಪಟುಗೆ 3 ಕೋಟಿ, ಕಂಚು ಪಡೆದ ಕ್ರೀಡಾಪಟುಗೆ 2 ಕೋಟಿ ರೂ. ಬಹುಮಾನ ನೀಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.
ಟೆಂಡರ್ ಪೂರ್ವದಲ್ಲಿ ನೀಡುವ ಮೀನುಗಾರಿಕೆ ಉತ್ಪನ್ನ ಮಾದರಿ ಹಾಗೂ ಅನಂತರ ಫಲಾನುಭವವಾಗಿ ವಿತರಿಸುವ ಉತ್ಪನ್ನಗಳ ಗುಣಮಟ್ಟ ಒಂದೇ ಆಗಿರಬೇಕು. ಈ ಬಗ್ಗೆ ಅಧಿಕಾರಿಗಳು ಗಮನ ಹರಿಸಬೇಕು ಎಂದು  ಅಧಿಕಾರಿಗಳಿಗೆ ಸೂಚಿಸಿದರು.
ವಿವಿಧ ಮೀನುಗಾರರು ತಮಗೆ ಆಗುತ್ತಿರುವ ಸಮಸ್ಯೆ, ಸರ್ಕಾರದಿಂದ ಸಿಗುತ್ತಿರುವ ಸೌಲಭ್ಯಗಳ ಬಗ್ಗೆ ಸಚಿವರ ಗಮನಕ್ಕೆ ತಂದರು. ಮೀನುಗಾರಿPಯಲ್ಲಿ ಲಂಚವಿಲ್ಲದೆ ಸಹಾಯಧಾನ, ಮಾರ್ಗದರ್ಶನ ಸಿಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕ್ರೀಡಾಪಟುವಾದ ಅರ್ಚನಾ ಕಾಮತ್ ಅವರಿಗೆ ಟೇಬಲ್ ಟೆನ್ನಿಸ್ ತರಬೇತಿ ಪqಯಲು ಪಟಿಯಾಲದಲ್ಲಿರುವ ಎನ್‍ಐಎಸ್‍ಇ ಸಂಸ್ಥೆಯಲ್ಲಿ ತರಬೇತಿಗೆ ರಾಜ್ಯ ಸರ್ಕಾರದಿಂದ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದರು.
ಸಂವಾದದಲ್ಲಿ ಮಾತನಾಡಿದ ಕ್ರೀಡಾಪಟುಗಳು, ತರಬೇತಿಗೆ ದುಬಾರಿ ವೆಚ್ಚವಾಗುತ್ತಿದ್ದು, ಹೆಚ್ಚಿನ ನೆರವು ನೀಡಬೇಕೆಂದು ಅಪೇಕ್ಷಿಸಿದರು.
ಪ್ರಜಾಪ್ರಭುತ್ವದಲ್ಲಿ ಜನರೇ ರಾಜರು. ಆದರೆ, ಅಧಿಕಾರಿಗಳು, ಮಂತ್ರಿಗಳು ಅದನ್ನು ಮರೆತು ನಾವೇ ರಾಜರು ಎಂದುಕೊಳ್ಳುತ್ತಾರೆ. ಮತದಾನ ಮಾಡುವಾಗ ಮಾತ್ರ ಜನರೇ ರಾಜರಾಗುತ್ತಾರೆ. ಇದು ಆಗಬಾರದು. ಜನರೇ ನಿಜವಾದ ರಾಜರು. ಜನಪ್ರತಿನಿಧಿಗಳು ಅರಿತುಕೊಂಡರೆ ರಾಮರಾಜ್ಯವಾಗುತ್ತದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ಮೀನುಗಾರಿಕೆ, ಯುವ ಸಬಲೀಕರಣ ಇಲಾಖೆಗಳು ಜನರ ಸಮಸ್ಯೆಗೆ ಸ್ಪಂದಿಸಬೇಕು. ಕಟ್ಟ ಕqಯ ವ್ಯಕ್ತಿಗೆ ಶ್ರೇಷ್ಠ ಗೌರವ ಸಿಗಬೇಕೆಂಬ ರೀತಿಯಲ್ಲಿ  ಕಾರ್ಯ ನಿರ್ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಒಂದು ಬಂಡಿಯ ಗಾಲಿಗಳು ಇದ್ದಂತೆ. ಜನಪ್ರತಿನಿಧಿಗಳು ಮಾತ್ರ ಉತ್ತಮ ಆಡಳಿತ ಕೊಡಲು ಸಾಧ್ಯ ಎಂದರು.
ಮುಂದಿನ ಬಜೆಟ್‍ನಲ್ಲಿ ಮೀನುಗಾರರಿಗೆ ಹೆಚ್ಚು ಮನೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ವಾರ್ತಾ  ಮತ್ತು ಸಂಪರ್ಕ ಇಲಾSಯ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಿನಾರಾಯಣ್, ನಿರ್ದೇಶಕ ವಿಶುಕುಮಾರ್, ಪಶು ಸಂಗೋಪನಾ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ವೀರಪ್ಪಗೌಡ, ರಜನೀಶ್ ಮೋಹನ್ ಮತ್ತಿತರರಿದ್ದರು.

No comments