ರಿಲಯನ್ಸ್ ಜಿಯೋ ಸಂಸ್ಥೆಗೆ 500 ರೂಪಾಯಿ ದಂಡ.
ನವದೆಹಲಿ : ಮುಖೇಶ್ ಅಂಬಾನಿ ಒಡೆತನ ರಿಲಯನ್ಸ್ ಜಿಯೋ ಸಂಸ್ಥೆ ಸರ್ಕಾರದ ಅನುಮತಿ ಪಡೆಯದೆ ತಮ್ಮ ಜಿಯೋ ಜಾಹೀರಾತಿಗಾಗಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಬಳಸಿದ್ದಕ್ಕೆ ಈಗ ದಂಡ ಕಟ್ಟಬೇಕಾದ ಪರಿಸ್ಥಿತಿ ಬಂದಿದೆ.
ರಿಲಯನ್ಸ್ ಜಿಯೋ ಭಾರತದಲ್ಲಿ 4G ನೆಟ್ವರ್ಕ್ ಅಭಿವೃದ್ದಿ ಹಾಗೂ ಅನುಷ್ಠಾನಕ್ಕೆ 60,000 ಕೋಟಿ ಹೂಡಿಕೆ ಮಾಡಿದೆ ಆದರೆ ಈಗ ಸರ್ಕಾರದ ಅನುಮತಿ ಪಡೆಯದೆ ಪ್ರಧಾನಿ ಭಾವಚಿತ್ರ ತಮ್ಮ ಜಾಹೀರಾತುಗಳಲ್ಲಿ ಬಳಸಿದ್ದಕ್ಕೆ 500 ರೂಪಾಯಿಗಳ ದಂಡ ಕಟ್ಟಬೇಕಾಗಿದೆ.
1950,ರಾಷ್ಟ್ರ ಲಾಂಛನ ಹಾಗೂ ಹೆಸರುಗಳ ಅನುಚಿತ ಬಳಕೆ ತಡೆಗಟ್ಟುವಿಕೆ ಕಾಯ್ದೆ ಅಡಿಯಲ್ಲಿ, ಯಾವುದೇ ಖಾಸಗಿ ಸಂಘ ಸಂಸ್ಥೆಗಳು ರಾಷ್ಟ್ರ ಲಾಂಛನ ಹಾಗೂ ಹೆಸರುಗಳನ್ನು ವ್ಯಾಪಾರ ಹಾಗು ವಾಣಿಜ್ಯ ಉದ್ದೇಶಕ್ಕೆ ಬಳಸುವ ಮೊದಲು ಸರ್ಕಾರದ ಅನುಮತಿ ಪಡೆಯುವ ಅವಶ್ಯಕತೆ ಇದೆ. ಈ ಕಾಯ್ದೆ ಅಡಿಯಲ್ಲಿ ದೇಶದ ಪ್ರಧಾನಿ ಹಾಗು ರಾಷ್ಟ್ರ ಪತಿಗಳ ಭಾವಚಿತ್ರ ಹಾಗು ಹೆಸರುಗಳನ್ನು ಬಳಸಬೇಕಾದರೂ ಸರ್ಕಾರದ ಅನುಮತಿ ಪಡೆಯಬೇಕು.
ಈ ಖಾಯ್ದೆಯನ್ನು ಉಲ್ಲಂಘನೆ ಮಾಡಿದರೆ 500 ರೂಪಾಯಿ ದಂಡ ತೆರಬೇಕಾಗುತ್ತದೆ.
ರಾಜ್ಯ ಸಭೆಯಲ್ಲಿ ಮಾಹಿತಿ ಹಾಗೂ ಪ್ರಸಾರ ಸಚಿವ ರಾಜ್ಯವರ್ಧನ್ ರಾಥೋಡ್ "ರಿಲಯನ್ಸ್ ಜಿಯೋ ಸರ್ಕಾರದ ಯಾವುದೇ ಅನುಮತಿ ಪಡೆಯದೆ ತಮ್ಮ ಜಾಹೀರಾತಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರ ಬಳಸಿಕೊಂಡಿದೆ" ಎಂದು ಹೇಳಿಕೆ ನೀಡಿದ್ದರು. ವಿರೋಧ ಪಕ್ಷಗಳೂ ಪ್ರಧಾನಿ ಭಾವಚಿತ್ರವನ್ನು ಜಿಯೋ ತನ್ನ ಮುಖಪುಟ ಜಾಹಿರಾತುಗಳಲ್ಲಿ ಬಳಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದವು.
ಆದರೆ ರಿಲಯನ್ಸ್ ಜಿಯೋ 500 ರೂ ದಂಡ ವಿಧಿಸಿರುವುದರ ಕುರಿತು ಇದುವರೆಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ರಿಲಯನ್ಸ್ ತನ್ನ ಜಿಯೋ ಗ್ರಾಹಕರಿಗೆ ಹೊಸ ವರ್ಷದ ಕೊಡುಗೆ ನೀಡಿದ್ದು ಎಲ್ಲಾ ಹೊಸ ಹಾಗೂ ಹಳೆಯ ಜಿಯೋ ಗ್ರಾಹಕರಿಗೆ ಮಾರ್ಚ್ 31 ರ ವರೆಗೆ ಉಚಿತ ಸೇವೆ ಒದಗಿಸುವುದಾಗಿ ಹೇಳಿದೆ.

No comments