Breaking News

ತಮಿಳುನಾಡು ಸಿಎಂ ಜಯಲಲಿತ ಆರೋಗ್ಯ ಸ್ಥಿತಿ ಗಂಭೀರ.

ಚೆನ್ನೈ : ತಮಿಳುನಾಡು ಮುಖ್ಯಮಂತ್ರಿ ಜಯಲಲಿತ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸಂಪೂರ್ಣ ಗುಣಮುಖರಾಗಿ ಇನ್ನೇನು ಆಸ್ಪತ್ರೆಯಿಂದ ಬಿಡುಗಡೆಯಾಗಬೇಕಾಗಿದ್ದ ಅವರಿಗೆ ಭಾನುವಾರ ಮತ್ತೆ ಹೃದಯಾಘಾತವಾದ ಕಾರಣ ಐಸಿಯುಗೆ ದಾಖಲಿಸಲಾಗಿತ್ತು. ಈಗಲೂ ಜೀವಾಧಾರಕ ವ್ಯವಸ್ಥೆ ಅಳವಡಿಸಲಾಗಿದೆ ಎಂದು ಅಪೋಲೋ ಆಸ್ಪತ್ರೆಯ ವಕ್ತಾರ ಮಾಧ್ಯಮಗಳಿಗೆ ಹೇಳಿದ್ದಾರೆ.
ಪ್ರತಿಷ್ಠಿತ ಏಮ್ಸ್ ತಜ್ಞ ವೈದ್ಯರ ತಂಡ ಜಯಲಲಿತಾ ಅವರಿಗೆ ಚಿಕಿತ್ಸೆ ನೀಡಲು ಅಪೋಲೋ ಆಸ್ಪತ್ರೆಗೆ ತೆರಳಿರುವುದಾಗಿ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಹೇಳಿದ್ದಾರೆ. ವಾಹನ ದಟ್ಟನೆ ನಿಯಂತ್ರಿಸಲು ಅಪೋಲೋ ಆಸ್ಪತ್ರೆಗೆ ತೆರಳುವ ಎಲ್ಲಾ ರಸ್ತೆಗಳ ಸಂಚಾರ ತಡೆಹಿಡಿಯಲಾಗಿದೆ.

No comments