Breaking News

ಶಾಲಾ ಬಾಲಕಿ ಮೇಲೆ ಅತ್ಯಾಚಾರ


ಕಲ್ಬುರ್ಗಿ :  ಅಪ್ರಾಪ್ತ ಶಾಲಾ ಬಾಲಕಿಯನ್ನು ಆಟೋ ಚಾಲಕನೊಬ್ಬ ಅಪಹರಿಸಿ ಅತ್ಯಾಚಾರ ನಡೆಸಿದ ಘಟನೆ ಸೇಡಂ ತಾಲೂಕಿನ ಕಡೆಚರ್ಲಾ ಎಂಬ ಗ್ರಾಮದಲ್ಲಿ ನಡೆದಿದೆ.ಆರೋಪಿಯನ್ನು  ಅಶೋಕ ಆಶಪ್ಪ ಎನಿಕ್ಯಾ  ಎಂದು ಗುರುತಿಸಲಾಗಿದೆ

ಆರೋಪಿ ಅಶೋಕ ದಿನಾಲು ಕಡೆಚರ್ಲಾದಿಂದ ಮುಧೋಳಕ್ಕೆ ಆಟೋ ನಡೆಸುತ್ತಿದ್ದ.ಈ ಸಂದರ್ಭದಲ್ಲಿ ಈತನ ಆಟೋದಲ್ಲಿ ಶಾಲೆಗೆ ಹೋಗುತ್ತಿದ್ದ ಅಪ್ರಾಪ್ತೆಯ ಬಾಲಕಿಯ ಜೊತೆ ಸಲುಗೆಯಿಂದ ವರ್ತಿಸುತ್ತಿದ್ದ  ಮತ್ತು ಇದನ್ನು ಗಮನಿಸಿದ ಪೋಷಕರು ಆಟೋ ಚಾಲಕನಿಗೆ ಕರೆದು ಬುದ್ದಿ ಹೇಳಿದ್ದರು .ಆರೋಪಿ ಅಶೋಕ ಅಪ್ರಾಪ್ತೆಯನ್ನು ಮದುವೆಯಾಗುವದಾಗಿ ನಂಬಿಸಿ ಡಿ. 1 ರಂದು ಹೈದರಾಬಾದಿಗೆ ಅಪಹರಿಸಿಕೊಂಡು ಹೋಗಿದ್ದಾನೆ. ಮರುದಿನ ಅಲ್ಲಿನ ಸಾಯಿಬಾಬಾ ಮಂದಿರದಲ್ಲಿ ಮದುವೆಯೂ ಆಗಿದ್ದಾನೆ.ಬಾಲಕಿ ನಾಪತ್ತೆಯಾದುದನ್ನು ಕಂಡು ಆಕೆಯ ಪಾಲಕರು ಅಶೋಕ ವಿರುದ್ಧ ಮುಧೋಳ ಠಾಣೆಯಲ್ಲಿ ದೂರು ನೀಡಿದ್ದಾರೆ.ಆರೋಪಿ  ತನ್ನ ಮೇಲೆ ಲೈಂಗಿಕದೌರ್ಜನ್ಯ ಎಸಗಿದ್ದಾನೆ ಎಂದು ಅಪ್ರಾಪ್ತ ಬಾಲಕಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ ಎಂದು ತಿಳಿದು ಬಂದಿದೆ .

No comments