ಭಾರತೀಯ ಸೇನೆಯಿಂದ ಎನ್ಕೌಂಟರ್, ಲಷ್ಕರ್ ಕಮಾಂಡರ್ ಅಬುಬಕರ್ ಹತ್ಯೆ.
ಜಮ್ಮು ಕಾಶ್ಮೀರ : ಭಾರತೀಯ ಸೇನೆ ಜಮ್ಮು ಕಾಶ್ಮೀರದ ಸೋಪೋರ್‌ನಲ್ಲಿ ಇಂದು ಮಧ್ಯಾಹ್ನ ನಡೆಸಿದ ಎನ್ಕೌಂಟರ್'ಗೆ ಲಷ್ಕರ್ ಇ ತೊಯ್ಬ ಉಗ್ರ ಸಂಘಟನೆಯ ಉನ್ನತ ಕಮಾಂಡರ್ ಆಗಿದ್ದ ಅಬುಬಕರ್‌ನನ್ನು ಹತ್ಯೆಗೈದಿದೆ.
ಜಮ್ಮು ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಸೋಪೋರ್‌ನ ಬೊಮಾಯಿ ಎಂಬ ಪ್ರದೇಶದಲ್ಲಿ ಲಷ್ಕರ್ ಉಗ್ರರು ಅಡಗಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಭದ್ರತಾ ಪಡೆಗಳು ಹಾಗೂ ಜಮ್ಮು ಕಾಶ್ಮೀರ ಪೋಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಉಗ್ರರು ಅಡಗಿಕೊಂಡಿದ್ದ ಜಾಗದ ಮೇಲೆ ಎಲ್ಲಾ ಕಡೆಗಳಿಂದ ಸುತ್ತುವರೆದು ಎನ್ಕೌಂಟರ್ ನಡೆಸಿದ್ದರು.
No comments