Breaking News

ಸಾಮಾಜಿಕ ಜಾಲ ತಾಣದಲ್ಲಿ ಸದ್ದು ಮಾಡುತ್ತಿರುವ ಅಣ್ಣಾಮಲೈ ಫೋಟೋ

ಚಿಕ್ಕಮಗಳೂರು  : ವರ್ಷಂಪ್ರತಿಯಂತೆ ಹನುಮ ಭಕ್ತರು ದತ್ತಮಾಲೆ ಹಾಕಿ ದತ್ತಪೀಠಕ್ಕೆ ಹೋಗಿ ಬರುವುದು ಕರಾವಳಿಯಲ್ಲಿ ಸರ್ವೇ ಸಾಮಾನ್ಯ. ಕರ್ನಾಟಕದಾದ್ಯಂತ ಸಾವಿರಾರು ಹಿಂದೂ ಭಕ್ತರು ದತ್ತಮಾಲೆ ಹಾಕಿ ಭೇಟಿ ನೀಡುವ ಈ ದತ್ತಪೀಠ ಪ್ರತಿಬಾರಿಯೂ ಒಂದಲ್ಲಾ ಒಂದು ವಿವಾದದಲ್ಲಿ ಸುದ್ದಿಯಲ್ಲಿರುತ್ತದೆ ಆದರೆ ಈ ಬಾರಿ ಮಾತ್ರ ಯಾವುದೇ ವಿವಾದಕ್ಕೆ ಎಡೆಮಾಡಿ ಕೊಡದೆ ಬೇರೆ ವಿಷಯದಲ್ಲಿ ಸುದ್ದಿಯಲ್ಲಿದೆ.
 
ನಿನ್ನೆ ಉಡುಪಿ ಮೂಲದ ದತ್ತಮಾಲದಾರಿಗಳು ದತ್ತ ಪೀಠದ ದರ್ಶನ ಪಡೆದು ವಾಪಾಸಾಗುವ ಸಂದರ್ಭದಲ್ಲಿ ರಕ್ಷಣಾ ಉಸ್ತುವಾರಿ ವಹಿಸಿಕೊಂಡಿದ್ದ, ಹಿಂದೆ ಉಡುಪಿಯ ಖಡಕ್ ಅಧಿಕಾರಿಯಾಗಿ ಉಡುಪಿಯ ಸಿಂಗಂ ಅಂತಾ ಬಿರುದು ಪಡೆದ ಎಸ್ಫಿ ಅಣ್ಣಾಮಲೈ ಅವರು ಸಿಕ್ಕ ಸಂಧರ್ಭದಲ್ಲಿ ವಾಹನದಲ್ಲಿ ಇದ್ದ ಹನುಮ ಭಕ್ತರು ಅಣ್ಣಾಮಲೈ ಅವರಿಗೆ ಅಭಿನಂದನೆ ಸಲ್ಲಿಸಲು ವಾಹನದಿಂದಲೆ ಕೈ ಚಾಚಿ ಹಸ್ತಲಾಘವ ಮಾಡಿದ್ದರು ಅದು ಛಾಯಗ್ರಾಹಕರ ಕಣ್ಣಿಗೆ ಬಿದ್ದಿದು ಆ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಇದೀಗ ಬಾರಿ ಸದ್ದು ಮಾಡುತ್ತಿದೆ.

Read this also - ಒಂದು ರೂಪಾಯಿಗೆ 35ಸಾವಿರ ಬೆಲೆಯ OnePlus 3T ಮೊಬೈಲ್ ನಿಮ್ಮದಾಗಿಸಿಕೊಳ್ಳಿ.

ಒಬ್ಬ ಅಧಿಕಾರಿ ಒಳ್ಳೆಯ ಕೆಲಸ ಮಾಡಿದ್ದರೆ ಜಾಗ ಯಾವುದೇ ಇರಲಿ, ಜನ ಯಾರೇ ಆಗಿರಲಿ ಅವರಿಗೆ ಮುಗಿಬಿದ್ದು ಗೌರವ ಸಲ್ಲಿಸುತ್ತಾರೆ ಇದಕ್ಕೆ ಉತ್ತಮ ಉದಾಹರಣೆ ಉಡುಪಿಯ ಜನರಿಂದ ಪ್ರಶಂಸೆಗೆ ಪಾತ್ರರಾಗಿ ರಿಯಲ್ ಸಿಂಗಂ ಎಂದು ಬಿರುದು ಪಡೆದುಕೊಂಡ ಎಸ್ಪಿ ಅಣ್ಣಾ ಮಲೈ.


No comments