Breaking News

ಬೀದಿನಾಯಿಗಳ ಧಾಳಿಗೆ ನಾಲ್ಕು ವರ್ಷದ ಬಾಲಕನ ಸಾವು.

ಪುರಿ : ಮನೆಯ ಹೊರಗೆ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕನ ಮೇಲೆ ಬೀದಿನಾಯಿಗಳು ಧಾಳಿಮಾಡಿ ಕೊಂದು ಹಾಕಿದ ಘಟನೆ ಪುರಿ ಜಗನ್ನಾಥ ಕಾಲೋನಿಯಲ್ಲಿ ನಡೆದಿದೆ.  ಮನೆಯ ಹೊರಗೆ ಆಟವಾಡುತ್ತಿದ್ದ ನಾಲ್ಕು ವರ್ಷದ ಕನ್ಹಾ ಬೀದಿನಾಯಿಗಳ ಧಾಳಿಗೆ ಮೃತಪಟ್ಟ ಬಾಲಕ.
ಬಾಲಕ ಗಾಳಿಪಟ ಹಾರಿಸಲು ತಾಯಿಯಲ್ಲಿ ಅನುಮತಿ ಕೇಳಿದ್ದಕ್ಕೆ ತಾಯಿ ಬಾಲಕನನ್ನು ತನ್ನ ತಂಗಿಯ ಮನೆಯಲ್ಲಿ ಆಟವಾಡಲು ಬಿಟ್ಟು ಮನೆಕೆಲಸದಲ್ಲಿ ನಿರತಳಾಗಿದ್ದಳು. ಸ್ವಲ್ಪ ಸಮಯದ ನಂತರ ಮಗನನ್ನು ಕರೆದುಕೊಂಡು ಬರಲು ಹೋದ ತಾಯಿಗೆ ಶಾಕ್ ಕಾದಿತ್ತು. ಮಗ ರಸ್ತೆ ಮಧ್ಯೆ ಪ್ರಜ್ಞೆಯಿಲ್ಲದೆ ಬಿದ್ದಿದ್ದ ಹಾಗೂ ನಾಲ್ಕೈದು ಬೀದಿನಾಯಿಗಳು ಆತನನ್ನು ಎಳೆದಾಡುತ್ತಿದ್ದವು. ತಕ್ಷಣ ಬಾಲಕನನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರು  ಆತ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದ.

No comments