Breaking News

ರಾಜಕೀಯ ಪಕ್ಷಗಳಿಗೆ ತೆರಿಗೆ ವಿನಾಯಿತಿ ಘೋಷಿಸಿದ ಕೇಂದ್ರ ಸರ್ಕಾರ


ನವದೆಹಲಿ : ಕಪ್ಪು ಹಣದ ವಿರುದ್ಧ ರಣಕಹಳೆ ಊದಿರುವ ಕೇಂದ್ರ ಸರಕಾರ ರಾಜಕೀಯ ಪಕ್ಷಗಳ  ಹೆಸರಿನಲ್ಲಿ ಇರುವ   ಅಕ್ರಮ ಕಾಳ ಧನವನ್ನು ಬ್ಯಾಂಕ್ನಲ್ಲಿ ಠೇವಣಿ ಇಟ್ಟರೆ ಅದರ ಮೇಲೆ ತೆರಿಗೆ ವಿನಾಯಿತಿಯನ್ನು ನೀಡಲಾಗುವುದು ಎಂದು ವಿತ್ತ ಸಚಿವಾಲಯದ ಕಾರ್ಯದರ್ಶಿ ಅಶೋಕ್ ಲವಾಸ ತಿಳಿಸಿದ್ದಾರೆ.
ಪಕ್ಷದ ಹೆಸರಿನಲ್ಲಿ ಇರುವ ಬ್ಯಾಂಕ್ ಖಾತೆಗಳಲ್ಲಿ ಹಣ ಠೇವಣಿ ಇಟ್ಟರೆ ತೆರಿಗೆ ವಿನಾಯಿತಿ ಇದೆ.
ಆದರೆ ವೈಯಕ್ತಿಕವಾಗಿ ಇಡುವ ಠೇವಣಿಗಳು ಸರಕಾರದ 'ರಾಡಾರ್'ನಿಂದ ತಪ್ಪಿಸಿಕೊಳ್ಳಲಾರವು. ವೈಯಕ್ತಿಕವಾಗಿ ಇಡಲಾಗುವ ಎಲ್ಲಾ ಠೇವಣಿಗಳ ಮಾಹಿತಿಯೂ ಸರಕಾರಕ್ಕೆ ದೊರಕುತ್ತದೆ ಎಂದು ಆದಾಯ ಇಲಾಖೆಯ ಕಾರ್ಯದರ್ಶಿ ಹಸ್ಮುಖ್ ಅಧಿಯಾ ಹೇಳಿದ್ದಾರೆ.
source -toi

No comments