Breaking News

ಐಟಿ ಅಧಿಕಾರಿಗಳ ವೇಷ ಧರಿಸಿ ದಾಳಿ ನಡೆಸಿದವರು ಜೈಲು ಪಾಲಾದರು


ಹುಬ್ಬಳ್ಳಿ : ತಮ್ಮನ್ನು ತಾವು ಐಟಿ ಅಧಿಕಾರಿಗಳು  ಎಂದು ಹೇಳಿ ಶ್ರೀಮಂತರಿಂದ ಹಣ ದೋಚುತ್ತಿದ್ದವರನ್ನು ಹುಬ್ಬಳ್ಳಿ ಪೊಲೀಸರು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ.
ಬಂಧಿತರನ್ನು ಶಿವಾನಂದ ಭಜಂತ್ರಿ ಮತ್ತು ರಾಮಚಂದ್ರ ಭಜಂತ್ರಿ ಎಂದು ಗುರುತಿಸಲಾಗಿದ್ದು, ಶ್ರೀಮಂತ ಮನೆಗಳನ್ನು ಗುರುತಿಸಿ ದಾಳಿ ಮಾಡುತ್ತಿದ್ದ ರಾಮಚಂದ್ರ ಹಾಗೂ ಶಿವಾನಂದ ಭಜಂತ್ರಿ ಅವರಿಗೆ ಕೈಗೆ ಸಿಕ್ಕಷ್ಟು ಹಣವನ್ನು  ತೆಗೆದುಕೊಂಡು ಪರಾರಿಯಾಗುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ರಾಮಚಂದ್ರ ಭಜಂತ್ರಿ ಇದೇ ರೀತಿ ಹುಬ್ಬಳ್ಳಿಯಲ್ಲಿ ಶ್ರೀಮಂತರೊಬ್ಬರ ಮನೆ ಮೇಲೆ ದಾಳಿ ಮಾಡಿದ್ದ ಸಂದರ್ಭದಲ್ಲೇ ಆತನನ್ನು ಸಾಕ್ಷ್ಯ ಸಮೇತ  ಬಂಧಿಸಿದ್ದಾರೆ. ತಾನು ಸಿಬಿಐ ಅಧಿಕಾರಿ ಎಂದು ಹೇಳಿಕೊಂಡು ಮನೆ ಮೇಲೆ ದಾಳಿ ಮಾಡಿ ಅಲ್ಲಿದ್ದ ಸುಮಾರು 1.5 ಲಕ್ಷ ರು. ಹಣವನ್ನು ದೋಚುತ್ತಿದ್ದಾಗ ಸ್ಥಳಕ್ಕಾಗಮಿಸಿದ ಪೊಲೀಸರು ಕೂಡಲೇ ಆತನನ್ನು ವಶಕ್ಕೆ ಪಡೆದಿದ್ದಾರೆ.

ಬಳಿಕ ಆತನ ಪರೀಕ್ಷಿಸಿದಾಗ ಆತ ನಕಲಿ ಸಿಬಿಐ ಅಧಿಕಾರಿ ಎಂದು ತಿಳಿದುಬಂದಿದೆ. ಇದೇ ವೇಳೆ ಈ ಹಿಂದೆ ಆತ ಮಾಡಿದ್ದ ಹಲವು ಅಕ್ರಮಗಳನ್ನು ಆತ ಹೇಳಿಕೊಂಡಿದ್ದು, ಟ್ರಕ್ ಮಾಲೀಕರೊಬ್ಬರನ್ನು ಬೆದರಿಸಿ ಅವರಿಂದ 60  ಸಾವಿರಕ್ಕೂ ಅಧಿಕ ಹಣವನ್ನು ದೋಚಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಬ್ಬರೂ ಆರೋಪಿಗಳು ತಮ್ಮ ಬಳಿ ಇದ್ದ ನಕಲಿ ಗುರುತಿನ ಚೀಟಿಯನ್ನು ತೋರಿಸಿ ಪೊಲೀಸರನ್ನೇ ಮೋಸ ಮಾಡಲು ಯತ್ನಿಸಿದ್ದಾರೆ. ಆದರೆ ಆರೋಪಿ ಮಾತನ್ನು  ನಂಬದ ಪೊಲೀಸರು ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಈತನ ಜಾಲ ಬಯಲಾಗಿದೆ.

ಪ್ರಸ್ತುತ ಇಬ್ಬರೂ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
source-kannada prabha

No comments