ಮಂಗಳೂರು ಶಂಕಿತ ಐಸಿಸ್ ಉಗ್ರನ ಬಂಧನ
ಮಂಗಳೂರು : ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶಂಕಿತ ಉಗ್ರನನ್ನು ಇಮಿಗ್ರೇಷನ್ ಪೋಲಿಸರು ಬಂಧಿಸಿದ ಘಟನೆ ನಿನ್ನೆ ನಡೆದಿದೆ. ಬಂಧಿತನನ್ನು ಕೇರಳ ಮೂಲದ ಮುನಾಫ್ ರಹೆಮಾನ್ ನಲಕತ್ ಎಂದು ಗುರುತಿಸಲಾಗಿದೆ. ಈತ ತನ್ನ ಹೆಂಡತಿಯ ಪಾಂಡೇಶ್ವರದ ಹೆಂಡತಿ ಮನೆಯಿಂದ ಹೆಂಡತಿ ಮತ್ತು ಮಕ್ಕಳ ಜೊತೆ ಉಗ್ರ ಸಂಘಟನೆಗೆ ಸೇರಲು ಹೋಗುವ ಸಂದರ್ಭದಲ್ಲಿ ಇಮಿಗ್ರೇಷನ್ ಪೊಲೀಸರು ಬಂಧಿಸಿದ್ದಾರೆ. ಈತನಿಗೆ ಈ ಮೊದಲೇ ಎನ್ ಐ ಎ ಯಿಂದ ಲುಕ್ ಓಟ್ ನೋಟಿಸ್ ಜಾರಿಯಾಗಿತ್ತು ಎನ್ನಲಾಗಿದೆ. ಇದೀಗ ರಹಸ್ಯ ಸ್ಥಳದಲ್ಲಿ ಈತನ ವಿಚಾರಣೆ ನಡೆದಿದ್ದು, ಹೆಚ್ಚಿನ ತನಿಖೆಗೆ ಇಮಿಗ್ರೇಷನ್ ಪೊಲೀಸರು ಎನ್‍ಐಗೆ ಹಸ್ತಾಂತರಿಸಿದ್ದಾರೆ.
source -mukta tv

No comments