Breaking News

ಕುಡಿದ ಅಮಲಿನಲ್ಲಿ ಬೆತ್ತಲೆಗೊಂಡು ವೈದ್ಯರ ಮೇಲೆ ಹಲ್ಲೆ ನಡೆಸಿದ ಮಂಗಳಮುಖಿಯರು


ದಾವಣಗೆರೆ :ಕುಡಿದ ಮತ್ತಿನಲ್ಲಿ  ಚಿಕಿತ್ಸೆಗೆಂದು ಸೋಮವಾರ ರಾತ್ರಿ ಚಿಗಟೇರಿ ಆಸ್ಪತ್ರೆಗೆ ಬಂದಿದ್ದ ಮಂಗಳಮುಖಿಯರು ಕರ್ತವ್ಯನಿರತ ವೈದ್ಯರ ಮೇಲೆ ಹಲ್ಲೆ  ನಡೆಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ . ವೈದ್ಯ ಶಶಿಕಾಂತ ಅವರ ಮೇಲೆ ಮಂಗಳಮುಖಿಯರು ಹಲ್ಲೆ ನಡೆಸಿದಾಗ ಮಧ್ಯೆ ಪ್ರವೇಶಿಸಿದ ಪೊಲೀಸರಿಗೂ ಥಳಿಸಿದ್ದಾರೆ. ನಾಗರಾಜ್ ಎಂಬ ಪೊಲೀಸ್ ಪೇದೆಗೆ ಕಚ್ಚಿ ಗಾಯಗೊಳಿಸಿದ್ದಾರೆ.ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಮಂಗಳಮುಖಿಯರಾದ ಸುಭಾನ್ ಮತ್ತು ಇರ್ಪಾನ್ ಎಂಬವರನ್ನು ಬಂಧಿಸಲಾಗಿದೆ

No comments