Breaking News

ತೃಪ್ತಿ ದೇಸಾಯಿಗೆ ಶಬರಿಮಲೆ ಪ್ರವೇಶ ಇಲ್ಲ ?


ಕೇರಳ : ಅಯ್ಯಪ್ಪ ಸ್ವಾಮಿ ದೇಗುಲ ಪ್ರವೇಶಿಸಲು ಭೂಮಾತಾ ಬ್ರಿಗೇಡ್‌ ಮುಖ್ಯಸ್ಥೆ ತೃಪ್ತಿ ದೇಸಾಯಿ ಅವರುಗೆ ಅವಕಾಶ ನೀಡುವುದಿಲ್ಲ ಎಂದು ಕೇರಳ ಸರಕಾರ ಸೋಮವಾರ ಸ್ಪಷ್ಟಪಡಿಸಿದೆ. ದೇಸಾಯಿ ಅವರು ನೂರಕ್ಕೂ ಹೆಚ್ಚು ಮಹಿಳಾ ಬೆಂಬಲಿಗರೊಂದಿಗೆ ದೇಗುಲ ಪ್ರವೇಶಿಸುವುದಾಗಿ ಹೇಳಿದ್ದರು. ದೇಗುಲದಲ್ಲಿ 15ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ನಿರ್ಬಂಧ ವಿಧಿಸಲಾಗಿದೆ. ''ಶಬರಿಮಲೆ ದೇಗುಲ ಟ್ರಾವಂಕೂರ್‌ ದೇವಸ್ವಂ ಮಂಡಳಿಯ ಆಡಳಿತದಲ್ಲಿದೆ. ಅದು ವಿಧಿಸಿರುವ ಸಂಪ್ರದಾಯಗಳು ಮತ್ತು ನಿಯಮಗಳು ಎಲ್ಲರಿಗೂ ಅನ್ವಯವಾಗುತ್ತದೆ,'' ಎಂದು ದೇವಸ್ವಂ ಸಚಿವ ಕಡಕಂಪಳ್ಳಿ ಸುರೇಂದ್ರನ್‌ ಸುದ್ದಿಗಾರರಿಗೆ ತಿಳಿಸಿದರು. 
source vk

No comments