Breaking News

ವಿನಾಯಕ ಬಾಳಿಗಾ ಕೊಲೆ ಪ್ರಕರಣ ಹೆಚ್ಚುವರಿ ಚಾರ್ಜ್ ಶೀಟ್ ಸಲ್ಲಿಕೆ


ಮಂಗಳೂರು : ಮಾರ್ಚ್ 21 ರಂದು RTI ಕಾರ್ಯಕರ್ತ ವಿನಾಯಕ ಬಾಳಿಗಾ ಅವರನ್ನು ಅವರ ಮನೆ ಮುಂದೆಯೇ ದುಷ್ಕರ್ಮಿಗಳು ಕೊಲೆಗೈದಿದ್ದರು .ಪ್ರಕರಣಕ್ಕೆ  ಸಂಬಂಧಿಸಿ ತನಿಖಾಧಿಕಾರಿಗಳು ಹೆಚ್ಚುವರಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ .
ಮಂಗಳೂರಿನ ಸಹಾಯಕ ಪೊಲೀಸ್ ಕಮಿಷನರ್, ಉದಯ್ ನಾಯಕ್ ಅವರು 325 ಪುಟಗಳ ಹೆಚ್ಚುವರಿ  ಚಾರ್ಜ್ ಶೀಟ್ ತಯಾರಿಸಿ ,ದೋಷಾರೋಪ ಪಟ್ಟಿಯಲ್ಲಿ 130 ಸಾಕ್ಷಿಗಳ ಪರೀಕ್ಷಣ ವಿವರಗಳನ್ನು ನೀಡಲಾಗಿದೆ ಎಂದು ತಿಳಿದು ಬಂದಿದೆ  ,ಪ್ರಕರಣದ ತನಿಖೆ ನಡೆಯುತ್ತಿದ್ದು  ರಕ್ತ ಮಾದರಿ ,ಬೆರಳಚ್ಚು ತಜ್ಞರ ವರದಿ ಬಂದ ಮೇಲೆ ಅದನ್ನು ಕೂಡ ದೋಷಾರೋಪ ಪಟ್ಟಿಯಲ್ಲಿ ಸೇರಿಸಲಾಗುವುದು ಎಂದು ಮೂಲಗಳಿಂದ ತಿಳಿದು ಬಂದಿದೆ 

No comments