Breaking News

ನೆರೆಮನೆಯ 5ವರ್ಷದ ಮಗುವನ್ನು 15ನೇ ಮಹಡಿಯಿಂದ ಎಸೆದು ಕೊಂದ ಮಹಿಳೆ.

ಮುಂಬೈ : ಮುಂಬೈನ ಬೈಸುಲ್ಲಾದಲ್ಲಿರುವ ವಿಘ್ನಹರ್ತಾ ಕಟ್ಟಡದಲ್ಲಿ ಮಹಿಳೆಯೊಬ್ಬಳು ತನ್ನ ನೆರೆಮನೆಯ 5ವರ್ಷದ ಮಗುವನ್ನು 15ನೇ ಮಹಡಿಯಿಂದ ಎಸೆದ ಪರಿಣಾಮ ಮಗು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೆಳಕಿಗೆ ಬಂದಿದೆ.
ಘಟನೆ ಸೋಮವಾರ ಮಧ್ಯಾಹ್ನ 12:30 ರ ಸುಮಾರಿಗೆ ನಡೆದಿದ್ದು ನೆರೆಹೊರೆಯ ಮಹಿಳೆಯರ ಮಧ್ಯೆ ಯಾವುದೋ ವಿಷಯಕ್ಕೆ ಸಂಬಂಧಿಸಿದಂತೆ  ಮಾತಿನ ಚಕಮಕಿ ನಡೆದಿದೆ. ನಂತರ ಇಬ್ಬರ ಜಗಳ ತಾರಕಕ್ಕೇರಿದ್ದು ಆರೋಪಿ ಮಹಿಳೆ ಅಲ್ಲೇ ಇದ್ದ ನೆರೆಮನೆಯ 5ವರ್ಷದ ಮಗುವನ್ನು ಎತ್ತಿ ಬಾಲ್ಕನಿಯಿಂದ ಎಸೆದಿದ್ದಾಳೆ.
ಕೆಳಕ್ಕೆ ಬಿದ್ದ ಮಗುವನ್ನು ಮುಂಬೈನ ಕೆಇಎಮ್ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರು ಆಸ್ಪತ್ರೆ ವೈದ್ಯರು ಮಗು ಅದಾಗಲೇ ಮೃತಪಟ್ಟಿರುವುದಾಗಿ ಹೇಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಸ್ಥಳೀಯ ಪೋಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಆರೋಪಿ ಮಹಿಳೆಯ ಬಂಧನ ಇನ್ನೂ ಆಗಿಲ್ಲ.

No comments