Breaking News

ವೀಡಿಯೋ - ಟರ್ಕಿಯ ರಷ್ಯಾ ರಾಯಭಾರಿಯನ್ನು ಗುಂಡಿಟ್ಟುಕೊಂದ ಗನ್ ಮ್ಯಾನ್.

ಟರ್ಕಿ : ಟರ್ಕಿಯ ರಷ್ಯಾ ರಾಯಭಾರಿಯನ್ನು ಅಂಗರಕ್ಷಕನೇ ಗುಂಡಿಟ್ಟು ಹತ್ಯೆ ಮಾಡಿದ್ದಾನೆ. ಆಂಕಾರದಲ್ಲಿರುವ ಚಿತ್ರಕಲಾ ಗ್ಯಾಲರಿಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವೊಂದರ ನಿಮಿತ್ತ ಭಾಷಣ ಮಾಡುತ್ತಿದ್ದ ರಷ್ಯಾ ರಾಯಭಾರಿ ಆಂಡ್ರ್ಯೂ ಕರ್ಲೋವ್ ಅವ್ ಅವರಿಗೆ ಅಂಗರಕ್ಷಕನೇ ಗುಂಡಿಕ್ಕಿದ್ದಾನೆ. 
ಗುಂಡು ತಾಗಿ ಕರ್ಲೋವ್ ಅವರು ಕೆಳಗೆ ಬಿದ್ದ ನಂತರ ಅಂಗರಕ್ಷಕ ಅಲ್ಲಹ್ ಅಕ್ಬರ್ ಎಂದು ಕೂಗಿದ್ದಾನೆ. ನಂತರ ಗಾಳಿಯಲ್ಲಿ ಗುಂಡುಹಾರಿಸುತ್ತಾ ಅಲೆಪ್ಪೊ ಮರೆಯಬೇಡಿ, ಸಿರಿಯಾ ಮರೆಯಬೇಡಿ ಎಂದು ಕೂಗಿದ್ದಾನೆ. 
ತಮ್ಮ ರಾಯಭಾರಿ ಮೇಲೆ ನಡೆದಿರುವ ದಾಳಿಯನ್ನು ರಷ್ಯಾ ವಿದೇಶಾಂಗ ಸಚಿವಾಲಯದ ವಕ್ತಾರೆ ಝಖರೋವಾ ಖಂಡಿಸಿದ್ದು , ಇದೊಂದು ಉಗ್ರ ದಾಳಿಯಾಗಿದ್ದು, ಟರ್ಕಿ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಸೂಕ್ತ ರೀತಿಯಲ್ಲಿ ತನಿಖೆ ನಡೆಸಲಾಗುವುದು ಎಂದು ಟರ್ಕಿ ಸರ್ಕಾರ ಭರವಸೆ ನೀಡಿದೆ. ಭಯೋತ್ಪಾದನ ಕೃತ್ಯಗಳನ್ನು ಸಹಿಸಲು ಸಾಧ್ಯವಿಲ್ಲ, ದಾಳಿಕೋರರಿಗೆ ಶಿಕ್ಷೆ ಖಚಿತವಾಗಿದ್ದು ಕರ್ಲೋವ್  ನಮ್ಮ ಹೃದಯದಲ್ಲಿ ಎಂದಿಗೂ ಇರುತ್ತಾರೆ ಎಂದು ಹೇಳಿದರು.

No comments