Breaking News

ನನ್ನ ಅಣ್ಣ ನಿರಪರಾಧಿ, ಮುಗ್ಧ, ಹೈದರಾಬಾದ್ ಸ್ಪೋಟದಲ್ಲಿ ಯಾಸಿನ್ ಪಾತ್ರವಿಲ್ಲ - ಅಬ್ದುಲ್ ಸಮದ್

ಹೈದರಾಬಾದ್ : ಹೈದರಾಬಾದಿನ ದಿಲ್ ಸುಖ್ ನಗರದಲ್ಲಿ ನಡೆದ ಅವಳಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ತೀರ್ಪು ನೀಡಿದ್ದ ಎನ್ಐಎ ವಿಶೇಷ ನ್ಯಾಯಾಲಯ ಯಾಸಿನ್ ಭಟ್ಕಳ್ ಸೇರಿದಂತೆ ಪ್ರಕರಣದ ಐವರು ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಿದೆ.
ಈ ತೀರ್ಪಿನ ಕುರಿತು ಪ್ರತಿಕ್ರಿಯಿಸಿದ ಯಾಸಿನ್ ಭಟ್ಕಳ್ ಕಿರಿಯ ಸಹೋದರ ಅಬ್ದುಲ್ ಸಮಾದ್, ತನ್ನ ಅಣ್ಣ ನಿರಪರಾಧಿಯಾಗಿದ್ದಾನೆ, ಆತ ಮುಗ್ದನಾಗಿದ್ದು ರಾಷ್ಟ್ರೀಯ ತನಿಖಾದಳ ಆತನ ವಿರುದ್ಧ ಪಿತೂರಿ ನಡೆಸಿ ಗಲ್ಲು ಶಿಕ್ಷೆ ನೀಡಿದೆ.
ದಿಲ್ ಸುಖ್ ನಗರ ಸ್ಪೋಟ ನಡೆದಾಗ ನನ್ನ ಅಣ್ಣ ಯಾಸಿನ್ ಹೈದರಾಬಾದಿನಲ್ಲಿರಲಿಲ್ಲ, ಹಾಗಾದರೆ ಹೇಗೆ ಆತ ಸ್ಪೋಟಕ್ಕೆ ಕಾರಣವಾಗುತ್ತಾನೆ. ಯಾವ ಕಾರಣಕ್ಕಾಗಿ ಆತನ ಮೇಲೆ ಆರೋಪ ಹೊರಿಸಲಾಗಿದೆ ತಿಳಿದಿಲ್ಲ. ಎನ್ಐಎ ಕೋರ್ಟ್ ಕೊಟ್ಟಿರುವ ತೀರ್ಪಿನ ವಿರುದ್ದ ಉಚ್ಚ ನ್ಯಾಯಾಲಯದಲ್ಲಿ ಮನವಿ ಸಲ್ಲಿಸುವುದಾಗಿ ಹೇಳಿದ್ದಾನೆ.
ಯಾಸಿನ್ ಭಟ್ಕಳ್ ಪರ ವಕೀಲ ಮಹದೇವನ್ ಕೂಡ "ದಿಲ್ ಸುಖ್ ನಗರದಲ್ಲಿ ನಡೆದ ಸ್ಪೋಟದಲ್ಲಿ ಯಾಸಿನ್ ಪಾತ್ರವಿಲ್ಲ, ಆತ ನಿರಪರಾಧಿಯಾಗಿದ್ದರೂ ಎನ್ಐಎ ಆತನನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದೆ. ಎನ್ಐಎ ನ್ಯಾಯಾಲಯದ ತೀರ್ಪಿನ ಪ್ರತಿ ಸಿಕ್ಕ ಕೂಡಲೇ ಹೈಕೋರ್ಟಿನಲ್ಲಿ ಅಪೀಲು ಸಲ್ಲಿಸುತ್ತೇವೆ ಎಂದಿದ್ದಾರೆ.

No comments