Breaking News

ಪಾಕಿಸ್ತಾನಕ್ಕೆ ಸಾಲ ನೀಡಲ್ಲ ವಿಶ್ವ ಬ್ಯಾಂಕ್


ಪಾಕಿಸ್ತಾನ ಸದಾ ತನ್ನ ನೆಲದಲ್ಲಿ ಉಗ್ರಗಾಮಿ ಚಟುವಟಿಕೆಗಳಿಗೆ ಕುಮಕ್ಕು ನೀಡಿ ತನ್ನ ನೆಲದ  ಅಭಿವೃದ್ಧಿ ಬಗ್ಗೆ ಗಮನಹರಿಸದೆ ಹಿನ್ನಲೆಯಲ್ಲಿ ಇದೀಗ ವಿಶ್ವ ಬ್ಯಾಂಕ್ ಪಾಕಿಸ್ತಾನಕ್ಕೆ ದೊಡ್ಡ ಶಾಕ್ ಒಂದನ್ನು  ನೀಡಿದೆ. ನೈಸರ್ಗಿಕ ಅನಿಲ ಯೋಜನೆ ಕೈಗೆತ್ತಿಕೊಳ್ಳಲು ಪಾಕಿಸ್ತಾನಕ್ಕೆ ನೀಡಬೇಕಿದ್ದ 100 ದಶಲಕ್ಷ ಡಾಲರ್‌ ಸಾಲವನ್ನು ವಿಶ್ವಬ್ಯಾಂಕ್‌ ರದ್ದು ಮಾಡಿದೆ. ಯೋಜನೆಯಲ್ಲಿ ಯಾವುದೇ ಪ್ರಗತಿ ಕೈಗೊಳ್ಳದ ಹಿನ್ನೆಲೆಯಲ್ಲಿ ಅದು, ಸಾಲ ಮಂಜೂರಾತಿಯನ್ನು ರದ್ದು ಮಾಡಿದೆ ಎಂದು ತಿಳಿದು ಬಂದಿದೆ .ಪಾಕಿಸ್ತಾನದ ಸುಯ್‌ ಸದರ್ನ್‌ ಗ್ಯಾಸ್‌ ಕಂಪನಿಯು ಕರಾಚಿ, ಸಿಂಧ್‌ ಮತ್ತು ಬಲೂಚಿಸ್ತಾನದಲ್ಲಿ ಅನಿಲ ಪೂರೈಕೆ ಜಾಲ ವಿಸ್ತರಿಸಲು ಸಾಲಕ್ಕೆ ಅನುಮತಿ ಪಡೆದಿತ್ತು ಆದರೆ ಈ ಯೋಜನೆಯ ಬಗ್ಗೆ ಪಾಕಿಸ್ತಾನ ನಿರಾಸಕ್ತಿ ತೋರಿಸಿದ ಹಿನ್ನಲೆಯಲ್ಲಿ 100 ದಶಲಕ್ಷ ಡಾಲರ್‌ ಸಾಲವನ್ನು ವಿಶ್ವಬ್ಯಾಂಕ್‌ ರದ್ದು ಮಾಡಿದೆ

No comments