Breaking News

ನಾನು ಮಾತಾಡಿದರೆ ಪಾರ್ಲಿಮೆಂಟಿನಲ್ಲಿ ಭೂಕಂಪ ಆಗುತ್ತದೆ : ರಾಹುಲ್ ಗಾಂಧಿ


ನವದೆಹಲಿ : ಐನೂರು ಮತ್ತು ಸಾವಿರ ನೋಟ್ ಅನ್ನು ಬ್ಯಾನ್ ಮಾಡಿದ  ಮೋದಿಯವರ ಕ್ರಮವನ್ನು ಖಂಡಿಸಿ ಸಂಸತ್ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ,ನೋಟ್ ಬ್ಯಾನ್ ಬಗ್ಗೆ ಪ್ರಧಾನಿ ಮೋದಿಯವರು ಸಂಸತ್ ನಲ್ಲಿ ಚರ್ಚೆ ನಡೆಸಲು ವಿಫಲರಾಗಿದ್ದಾರೆ ದೇಶದ ಎಲ್ಲಾ ಕಡೆ ಪ್ರದಾನಿ ಮೋದಿಗೆ ಭಾಷಣ ಮಾಡಲು ಆಗುತ್ತದೆ, ಆದರೆ ಲೋಕಸಭೆಗೆ ಬರಲು ಭಯ ಪಡುತ್ತಿದ್ದಾರೆ, ಲೋಕಸಭೆಯಲ್ಲಿ ಕುಳಿತು ಕೊಳ್ಳಲು ಹೆದರುತ್ತಿದ್ದಾರೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ  ಸತತ ಒಂದು ತಿಂಗಳಿಂದ ಪಾರ್ಲಿಮೆಂಟಿನಲ್ಲಿ  ನೋಟ್ ಬ್ಯಾನ್ ಬಗ್ಗೆ ಚರ್ಚೆಗೆ ಆಡಳಿತ ಪಕ್ಷವನ್ನು ಆಗ್ರಹಿಸುತಿದ್ದೇವೆ ಆದರೆ ಮೋದಿ ಸರಕಾರ ಚರ್ಚೆಯಿಂದ ನುಣುಚಿಕೊಳ್ಳುತ್ತಿದೆ ಮತ್ತು  ನಾವು ಲೋಕಸಭೆಯಲ್ಲಿ ಚರ್ಚೆ ಆರಂಭಿಸದರೇ ಮೋದಿ ಅವರ ಹಗರಣದ ಬಗ್ಗೆ ಮಾತನಾಡುತ್ತೇನೆ, ನಾನು ಸಂಸತ್ತಿನಲ್ಲಿ ಮಾತನಾಡುವಾಗ ಭೂಕಂಪ ಆಗುವುದು ಖಚಿತ ಎಂದು ಹೇಳಿದ್ದಾರೆ.

No comments