Breaking News

ಆಕಸ್ಮಿಕವಾಗಿ ನದಿಗೆ ಬಿದ್ದು ನಾಲ್ವರು ಸಾವು
ಬೆಳ್ತಂಗಡಿ: ಬೆಳ್ತಂಗಡಿ ತಾಲ್ಲೂಕಿನ ಗಡಾಯಿಕಲ್ಲು ಬಳಿ ಒಂದೇ ಕುಟುಂಬದ 4 ಜನರು ನೀರಲ್ಲಿ ಆಕಸ್ಮಿಕವಾಗಿ ಮುಳುಗಿ ಮರಣ ಹೊಂದಿದ್ದಾರೆ. ಕಾಜೂರು ದರ್ಗಾ ವೀಕ್ಷಣೆಗೆಂದು ಬಂದ ಕಾಪು ಮೂಲದವರು ಎಂದು ಹೇಳಲಾಗಿದೆ. ಮೃತರನ್ನು ರಹೀಮ್ (30), ಈತನ ಪತ್ನಿ ರುಬೀನಾ (25), ಯಾಸ್ಮಿನ್ (23) ಮತ್ತು ಸುಬಾನ್ (15) ಎಂದು ಗುರುತಿಸಲಾಗಿದೆ.
ದರ್ಗಾ ವೀಕ್ಷಿಸಿ ಹಿಂತಿರುಗುತ್ತಿದ್ದ ವೇಳೆ ಘಟನೆ ನಡೆದಿದೆ. ಈ ವೇಳೆ 15 ವರುಷದ ಬಾಲಕ ನೀರು ಪಾಲಾಗುತ್ತಿದ್ದ ವೇಳೆ ರಕ್ಷಿಸಲು ಹೋದಾಗ ಬಾಲಕನೂ ಸೇರಿದಂತೆ ಐವರು ನೀರುಪಾಲಾಗಿದ್ದು ಇದನ್ನು ನೋಡಿದ ಸ್ಥಳಿಯರು ಓರ್ವ ಮಹಿಳೆಯನ್ನು ರಕ್ಷಿಸುವಲ್ಲಿ ಸಫಲಾಗಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ 

No comments