Breaking News

ಸಿಎಂ ಸಿದ್ದರಾಮಯ್ಯನವರ ಮೇಲೆ ಕಕ್ಕ ಮಾಡಿದ ಕಾಗೆ


ಮಂಜೇಶ್ವರ : ಕರ್ನಾಟಕ ಮುಖ್ಯ ಮಂತ್ರಿ ಸಿದ್ದರಾಮಯ್ಯ್ ಅವರಿಗೆ ಕಾಗೆ ಕಾಟ ಮುಂದುವರಿದಿದ್ದು ಇದಕ್ಕೆ ನಿದರ್ಶನ ಎಂಬಂತೆ ಈ ಬಾರಿ ಕಾಗೆ ಸಿಎಂ ಸಿದ್ದರಾಮಯ್ಯನವರ ಮೇಲೆಯೇ ಹಿಕ್ಕೆ ಹಾಕಿದೆ.

ಕರ್ನಾಟಕ ಕೇರಳ ಗಡಿ ಭಾಗದ ಮಂಜೇಶ್ವರದಲ್ಲಿ ಕವಿ ಗೋವಿಂದ ಪೈ ಗಳ ಗಿಳಿವಿಂಡು ಸ್ಮಾರಕ ಮನೆಯ ಉದ್ಘಾಟಕರಾಗಿ ಆಗಮಿಸಿದ್ದ ಸಿ ಎಂ ಸಿದ್ದರಾಮಯ್ಯನವರಿಗೆ ಕಾಗೆ ಕಾಟ ನೀಡಿದೆ.

ತೆರೆದ ವೇದಿಕೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಕೇರಳ, ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮಂತ್ರಿಗಳ ಜೊತೆ ಕೂತಿದ್ದ ಸಿಎಂ ಸಿದ್ದರಾಮಯ್ಯಗೆ ವೇದಿಕೆಯ ಹಿಂದಿನ ಮರದಲ್ಲಿ ಕುಳಿತಿದ್ದ ಕಾಗೆ ನೇರವಾಗಿ ಹಿಕ್ಕೆ ಹಾಕಿದೆ.

ಕಾಗೆ ಹಿಕ್ಕೆ ಕಂಡು ಸಿಎಂ ವಿಚಲಿತರಾದರೂ ತಕ್ಷಣ ಜೊತೆಯಲ್ಲಿದ್ದವರ ಗಮನಕ್ಕೆ ತಂದರು. ಆಮೇಲೆ ಸೆಕ್ಯುರಿಟಿ ಗಾರ್ಡ್ ಹಾಗೂ ಶಾಸಕ ಮೊಯಿದ್ದೀನ್ ಭಾವ ಬಂದು ಸಿಎಂ ಪಂಚೆ ಮೇಲೆ ಕಾಗೆ ಹಾಕಿದ ಹಿಕ್ಕೆಯನ್ನು ಶುಚಿ ಗೊಳಿಸಿದರು.
center>
loading...

No comments