Breaking News

ಸಿ.ಬಿ.ಐ. ನೂತನ ನಿರ್ದೇಶಕರಾಗಿ ಅಲೋಕ್ ವರ್ಮಾ ನೇಮಕ


ನವದೆಹಲಿ.  : ದೆಹಲಿ ಪೊಲೀಸ್ ಆಯುಕ್ತ ಅಲೋಕ್ ವರ್ಮಾ ಅವರನ್ನು, ಸಿ.ಬಿ.ಐ. ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. ವರ್ಮ 2 ವರ್ಷಗಳ ಕಾಲ ಸಿ.ಬಿ.ಐ. ಮುಖ್ಯಸ್ಥರಾಗಿರುತ್ತಾರೆ.  ಹಿರಿಯ ಐ.ಪಿ.ಎಸ್. ಅಧಿಕಾರಿಯಾಗಿರುವ ವರ್ಮ ಅಂಡಮಾನ್ ನಿಕೋಬಾರ್, ಪಾಂಡಿಚೇರಿ ಡಿ.ಜಿ.ಪಿ.ಯಾಗಿ ಕಾರ್ಯನಿರ್ವಹಿಸಿದ್ದು, ಪೊಲೀಸ್ ಇಲಾಖೆಯ ವಿವಿಧ ವಿಭಾಗಗಳಲ್ಲಿ ವಿವಿಧೆಡೆ ಕೆಲಸ ಮಾಡಿದ್ದಾರೆ. ಈಗ ಸಿ.ಬಿ.ಐ. ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಈ ಹುದ್ದೆಗೆ ಆಯ್ಕೆಯಾಗಲಿದ್ದಾರೆ ಎನ್ನಲಾಗಿದ್ದ ಆರ್.ಕೆ. ದತ್ತಾ ಅವರಿಗೆ ಅವಕಾಶ ತಪ್ಪಿದೆ.

loading...

No comments