Breaking News

ಮೋದಿ ವಿರುದ್ಧ ಹರಿಹಾಯ್ದಿದ Hdk


ಮಂಡ್ಯ (ಜ.27): ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಇಂದು ಪ್ರಧಾನಿ ನರೇಂದ್ರ ಮೊದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಜೆಡಿಎಸ್ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಲಕ್ಷಾಂತರ ರೂ ಖರ್ಚು ಮಾಡಿ ಮೋದಿ ಜುಬ್ಬ ತಗೋತಾರೆ, ಇದೇನಾ ನಮ್ಮ ಸಂಸ್ಕೃತಿ ಎಂದು ಪ್ರಶ್ನಿಸಿದ್ದಾರೆ.

ವಿದೇಶದಲ್ಲಿ ನಮ್ಮ ಸಂಸ್ಕೃತಿಯನ್ನು ಗಾಂಧಿ ಸರಳತೆಯಲ್ಲಿ ಪ್ರತಿಬಿಂಬಿಸಿದ್ದರು. ಕೇಂದ್ರ ಸರ್ಕಾರ ಮಹಾತ್ಮ ಗಾಂಧಿಯನ್ನೇ ಕಿತ್ತೊಗೆಯುವ ಕೆಲಸ ಮಾಡುತ್ತಿದೆ,ಎಂದು ಅವರು ಕಿಡಿಕಾರಿದ್ದಾರೆ.

ಪ್ರಧಾನಿ ಮೋದಿ ಹಿಂದೆ ಚಹಾ ಮಾರುತ್ತಿದ್ದರು ಅಂತಾರೆ, ಆದರೆ ಈಗ ಅವರು ದೇಶವನ್ನೇ ಮಾರುತ್ತಿದ್ದಾರೆ, ಎಂದು ಮೋದಿ ವಿರುದ್ಧ ಹರಿಹಾಯ್ದಿದ್ದಾರೆ
loading...

No comments