Breaking News

ನೆಲ್ಯಾಡಿಯ ಬಾರ್ ಗಲಾಟೆ ಸಪ್ಲಾಯರ್ ಮೇಲೆ ಹಲ್ಲೆ


ಪುತ್ತೂರು : ರಾಷ್ಟ್ರೀಯ ಹೆದ್ದಾರಿ ನೆಲ್ಯಾಡಿಯ ಬಾರ್ ಒಂದಕ್ಕೆ ಮದ್ಯ ಸೇವಿಸಲು ಬಂದ 9 ಮಂದಿಯ ತಂಡ ರಾತ್ರಿ ವೇಳೆ ಬಾರಿನಲ್ಲಿ ಕುಡಿದು ಅಲ್ಲಿನ ಸಪ್ಲಾಯರ್ ಮೇಲೆ ಹಲ್ಲೆ ನಡೆಸಿ ತೆರಳಿದ್ದು, ಹಲ್ಲೆ ನಡೆಸಿದವರು ಯಾರೆಂಬುದು ಗೊತ್ತಾಗಿಲ್ಲ. ಮಂಗಳವಾರ ರಾತ್ರಿ ಈ ಘಟನೆ ನಡೆದಿದೆ. ಆದರೆ ಬುಧವಾರ ಬೆಳಿಗ್ಗೆ ನೆಲ್ಯಾಡಿಗೆ ಪೊಲೀಸ್ ಪಡೆಯೇ ಬಂದಿದ್ದು,  ಗಲಾಟೆ ನಡೆದ ಬಾರ್ ಪ್ರಭಾವಿ ವ್ಯಕ್ತಿಗೆ ಸೇರಿದ ಕಾರಣ ಭಾರೀ ಸಂಖ್ಯೆಯ ಪೊಲೀಸರು ಬರಲು ಕಾರಣವಾಗಿದೆ.

ಸ್ಥಳಕ್ಕೆ ಬೆರಳಚ್ಚು ತಜ್ಞರನ್ನೂ ಕರೆಸಲಾಗಿತ್ತು. ಆದರೆ ಹಲ್ಲೆಕೋರರು ಮಾತ್ರ ಪತ್ತೆಯಾಗಿಲ್ಲ ಎನ್ನಲಾಗಿದೆ.
loading...

No comments