ನ್ಯೂ ಇಯರ್ ಪಾರ್ಟಿ ಕುಡಿದ ಅಮಲಿನಲ್ಲಿ ಬರ್ಬರ ಹತ್ಯೆ
ಸುದ್ದಿ 24×7 ವರದಿ :- ಮಂಗಳೂರು ಇಡೀ ದೇಶ ನಿನ್ನೆ ರಾತ್ರಿ ಹೊಸ ವರ್ಷಾಚರಣೆಯ ಗುಂಗಿನಲ್ಲಿ ಇದ್ದರೆ ಇತ್ತ ಮಂಗಳೂರಿನ ಪಬ್ಬ್ ಒಂದರಲ್ಲಿ ನೆತ್ತರ ಕೊಡಿ ಹರಿಯತೊಡಗಿತು.
ಕಾರಣ ಮಧ್ಯದ ಅಮಲಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರಿಬ್ಬರ ನಡುವೆ ಗಲಾಟೆ ಆರಂಭವಾಗಿ ಅದು ಒಬ್ಬನ ಕೊಲೆಯ ಮೂಲಕ ಅಂತ್ಯ ಗೊಂಡಿದೆ .
ಮೊದಲು ಚಿಕ್ಕದಾಗಿದ್ದ ಗಲಾಟೆ ಸೆಕೆಂಡ್ ಅಂತರದಲ್ಲಿ ದೊಡ್ಡ ರೂಪ ಪಡೆದು ಹೊಸ ವರ್ಷಕ್ಕೆ ಸ್ನೇಹಿತನ ಬಲಿಯ ಮೂಲಕ ಜೈಲು ವಾಸ ಆರಂಭವಾಯಿತ್ತು .
ಕೊಲೆಯಾದ ವ್ಯಕ್ತಿ ರುದ್ರಮಣಿ ಸಂತೋಷ್ (25) ಎಂದು ತಿಳಿದಿದ್ದು ,ಪ್ರದೀಪ್ ಶಿಕಾರಿಪುರ ಎಂಬಾತ ಕೊಲೆ ಮಾಡಿದ್ದು ಎಂದು ತಿಳಿದುಬಂದಿದೆ .
ಉಳ್ಳಾಲ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
No comments