Breaking News

ವಿಟ್ಲ ಪೊಲೀಸರಿಂದ 13 ಕಿಲೋ ಗಾಂಜಾ ಸೇರಿ ,ಇಬ್ಬರ ಸೆರೆಬಂಟ್ವಾಳ: ಅಂತಾರಾಜ್ಯ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ವಿಟ್ಲ ಪೋಲಿಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ವ್ಯಕ್ತಿಗಳನ್ನು ಬಂಟ್ವಾಳ ಕನ್ಯಾನ ನಿವಾಸಿ ಖಲಂದರ್ (22), ಉತ್ತರಪ್ರದೇಶ ರಾಜ್ಯದ ಅರ್ಮಾನ್ (25) ಎಂದು ಗುರುತಿಸಲಾಗಿದೆ. ವಿಟ್ಲ ಪೊಲೀಸರಿಗೆ ಬಂದ ಖಚಿತ ಮಾಹಿತಿಯಂತೆ ಅಳಿಕೆ ಗ್ರಾಮದ ಕಾಂತಡ್ಕ ಎಂಬಲ್ಲಿ ಇಬ್ಬರು ವ್ಯಕ್ತಿಗಳು ತಮ್ಮ ಬಳಿ ಗಾಂಜಾವನ್ನು ಇಟ್ಟು ಕೊಂಡು ಮಾರಾಟ ಮಾಡುತ್ತಿದ್ದಾರೆಂಬ ಮಾಹಿತಿಯಂತೆ  ಡಿ ವೈ ಎಸ್ಪಿ ರವೀಶ್, ಸಿ ಪಿ ಐ ಮಂಜಯ್ಯ ಹಾಗೂ ವಿಟ್ಲ ಪಿ ಎಸ್ ಐ ನಾಗರಾಜು ರವರನ್ನು ಒಳಗೊಂಡ ತಂಡವನ್ನೊಂದನ್ನು ರಚಿಸಿ ಅಳಿಕೆ ಗ್ರಾಮದ ಕಾಂತಡ್ಕ ಎಂಬಲ್ಲಿಂದ ವ್ಯಕ್ತಿಗಳಿಬ್ಬರನ್ನು ವಶಕ್ಕೆ ಪಡೆದುಕೊಂಡು ಅವರಲ್ಲಿದ್ದ ಬ್ಯಾಗೊಂದನ್ನು ಪರಿಶೀಲಿಸಿದಾಗ ಅದರಲ್ಲಿ ಸುಮಾರು 13 ಕೆಜಿ ತೂಕದ ಗಾಂಜಾ ಪೊಟ್ಟಣಗಳು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ .

No comments