Breaking News

ಎಸಿಬಿ ಬಲೆಗೆ ಬಿದ್ದ ಭೂಸ್ವಾಧಿನಾಧಿಕಾರಿ ಗಾಯತ್ರಿ ನಾಯಕ್


ಮಂಗಳೂರು : ವಿಶೇಷ ಭೂಸ್ವಾಧಿನಾಧಿಕಾರಿ  ಗಾಯತ್ರಿ ನಾಯಕ್ ಅವರು ತಮ್ಮ ಕಚೇರಿಯಲ್ಲಿ  ವ್ಯಕ್ತಿಯೊಬ್ಬರಿಂದ  ಲಂಚ ಪಡೆಯುತ್ತಿದ್ದ ಸಂದರ್ಭದಲ್ಲಿ  ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರು ದಾಳಿ ನಡೆಸಿ ಗಾಯತ್ರಿ ನಾಯಕ್ ಅವರನ್ನು    ಬಂಧಿಸಿದ ಘಟನೆ ವರದಿ ಆಗಿದೆ .
ಕಾಸರಗೋಡಿನ ಯೋಗೀಶ್ ಅವರಿಗೆ ಭೂಪರಿಹಾರದ ಮೊತ್ತದಲ್ಲಿ 16 ಲಕ್ಷ ರೂ ಲಂಚ ನೀಡಬೇಕೆಂದು ಗಾಯತ್ರಿ ನಾಯಕ್ ಬೇಡಿಕೆ ಮುಂದಿಟ್ಟಿದ್ದರು, ಅದರಂತೆ ಈಗಾಗಲೇ 1.30 ಲಕ್ಷ ರೂಗಳನ್ನು ಯೋಗಿಶ್ ನೀಡಿದ್ದರು ಎನ್ನಲಾಗಿದೆ. ಆದರೂ ಗಾಯತ್ರಿ ನಾಯಕ್ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ,ಯೋಗೀಶ್ ಎಸಿಬಿ  ಪೋಲಿಸರಿಗೆ ದೂರು ನೀಡಿದ್ದರೆನ್ನಲಾಗಿದೆ.ನೀಡಿದ ದೂರಿನ ಆಧಾರದ ಮೇಲೆ  ನಗರದ ಮಿನಿ ವಿಧಾನಸೌಧದ ಕಚೇರಿಯಲ್ಲಿ ಯೋಗೀಶ್ ಅವರಿಂದ ರೂ 20000 ಲಂಚ ಸ್ವಿಕರೀಸುತ್ತಿದ್ದ ವೇಳೆ ರೆಡ್ ಹ್ಯಾಂಡ್ ಆಗಿ ಗಾಯತ್ರಿ ನಾಯಕ್  ಸಿಕ್ಕಿ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ 

No comments