ನನ್ನ ಹೇಳಿಕೆಯನ್ನು ತಿರುಚಲಾಗಿದೆ : ಪರಮೇಶ್ವರ್
ಬೆಂಗಳೂರು : ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆದ ದೌರ್ಜನ್ಯ ಬಗ್ಗೆ ಗ್ರಹ ಸಚಿವ ಪರಮೇಶ್ವರ್ ಅವರು ನೀಡಿದ ಹೇಳಿಕೆ ಮೇಲೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು .
ಈ ಹಿನ್ನಲೆಯಲ್ಲಿ ಗ್ರಹಸಚಿವರು ನಡೆಸಿದ ಸುದ್ದಿ ಗೋಷ್ಠಿಯ ವಿವರ
ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ನಡೆದಂತ ಘಟನೆ ದುರದೃಷ್ಟಕರ ಇವತ್ತು ಈ ಘಟನೆಯನ್ನು ವಿಭಿನ್ನ ರೀತಿಯಲ್ಲಿ ವಿಶ್ವಕ್ಕೆ ತೋರಿಸಿ ಬೆಂಗಳೂರನ್ನು ಒಂದು ರೀತಿಯಲ್ಲಿ ತೋರಿಸುವ ಪ್ರಯತ್ನ ನಡೆಯುತ್ತಿದೆ. ಬೆಂಗಳೂರು ಬಹಳ ಶಾಂತಿಯಿಂದ ಇರುವ ಪಟ್ಟಣ ,ಇಲ್ಲಿ ಯುವಕರು ಮಹಿಳೆಯರು ಸುರಕ್ಷಿತ ಆಗಿರುವ ಪಟ್ಟಣ ಇಂತಹ ಘಟನೆ ಬೆಂಗಳೂರಿನ ಹೆಸರಿಗೆ ಮಸಿ ಬಳಿಯಲು ಸಾಧ್ಯವಿಲ್ಲ ನಮ್ಮ ಸರ್ಕಾರ ಮಹಿಳೆ ಮತ್ತು ನಾಗರಿಕರ ರಕ್ಷಣೆ ನೀಡಲು ಬದ್ಧವಾಗಿದೆ ,ರಕ್ಷಣೆ ಹೆಸರಿನಲ್ಲಿ ಯಾವುದೇ ಸಂಧಾನ ಇಲ್ಲ ,ನಾನು ಗ್ರಹ ಸಚಿವ ಆದ ಮೇಲೆ ಮಹಿಳೆ ಮತ್ತು ಮಕ್ಕಳ ರಕ್ಷಣೆ ಬಗ್ಗೆ ಹೆಚ್ಚಿನ ಆದ್ಯತೆ ನೀಡಿದ್ದೇನೆ ,ಮಹಿಳೆ ಮತ್ತು ಮಕ್ಕಳ ರಕ್ಷಣೆ ಸರಕಾರ ಬದ್ಧವಾಗಿದೆ ,ಘಟನೆಯ ಬಗ್ಗೆ ನಾನು ರಾಷ್ಟ್ರೀಯ ಮಾಧ್ಯಮಕ್ಕೆ ನೀಡಿದ ಹೇಳಿಕೆಯನ್ನು ತಿರುಚಿ ಪ್ರಕಟಿಸಲಾಗಿದೆ ಇದು ಒಳ್ಳೆಯ ಬೆಳವಣಿಗೆ ಅಲ್ಲ ,ಬೆಂಗಳೂರಿನಲ್ಲಿ ಹೊಸ ವರ್ಷ ಸಂದರ್ಭದಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಸಿ ಹಿರಿಯ ಅಧಿಕಾರಿಗಳ ತಂಡವನ್ನು ನಿಯೋಜಿಸಲಾಗಿತ್ತು ,೧೫೦೦ ಹೆಚ್ಚು ಪೊಲೀಸರನ್ನುನಿಯೋಜಿಸಲಾಗಿತ್ತು ಹೊಸ ವರ್ಷ ಆಚರಣೆಗೆ ಬಿಗಿ ಬಂದೋಬಸ್ತ್ ನೀಡಿದ್ದೆವು ಮತ್ತು ಕಮ್ಮನ ಹಳ್ಳಿಯಲ್ಲಿ ನಡೆದ ಘಟನೆ ಬಗ್ಗೆ ಕೂಡ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದರು ,ಬೆಂಗಳೂರಿನಾಧ್ಯಂತ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಸಿಸಿ ಟಿವಿ ಮತ್ತು ಮಹಿಳೆಯರ ರಕ್ಷಣೆಗೆ ಹೆಚ್ಚಿನ ಮಹಿಳಾ ಅಧಿಕಾರಿಗಳನ್ನು ನೇಮಕ ಮಾಡಲಾಗುವುದು ಎಂದು ಹೇಳಿದರು
No comments