Breaking News

ಸುಷ್ಮಾ ಸ್ವರಾಜ್ ಎಚ್ಚರಿಕೆಗೆ ತಲೆಬಾಗಿದ ಅಮೆಜಾನ್





ನವದೆಹಲಿ : ಕೆನಡಾದಲ್ಲಿ ಅಮೆಜಾನ್ ತನ್ನ ಆನ್ಲೈನ್ ಮಾರುಕಟ್ಟೆಯಲ್ಲಿ ಭಾರತೀಯ ರಾಷ್ಟ್ರಧ್ವಜ ಹೋಲುವ ಡೋರ್ ಮ್ಯಾಟ್ ಹಾಗೂ ಇತರ ಉತ್ಪನ್ನಗಳನ್ನು ಮಾರಾಟ ಮಾಡುತ್ತಿರುವ ವಿರುದ್ಧ ವಿದೇಶಾಂಗ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಕೆಂಡಾಮಂಡಲವಾದ ಹಿನ್ನಲೆಯಲ್ಲಿ ಅಮೆಜಾನ್  ಇದೀಗ ಭೇಷರತ್ ಕ್ಷಮೆ ಯಾಚಿಸಿದೆ.

ಈ ಬಗ್ಗೆ ಸ್ವತಃ ಅಮೆಜಾನ್ ಇಂಡಿಯಾ ಸಂಸ್ಥೆಯ ಉಪಾಧ್ಯಕ್ಷ ಅಮಿತ್ ಅಗರ್ವಾಲ್ ಅವರು ಕೇಂದ್ರ ಸಚಿವೆ ಸುಷ್ಮಸ್ವರಾಜ್ ಅವರಿಗೆ ಪತ್ರ ಬರೆದಿದ್ದು, ಭಾರತೀಯ ಕಾನೂನನ್ನು ಮತ್ತು ಭಾರತೀಯರ ಭಾವನೆಗಳನ್ನು ಅಮೆಜಾನ್  ಸಂಸ್ಥೆ ಗೌರವಿಸುತ್ತದೆ. ಭಾರತೀಯರ ಭಾವನೆಗಳಿಗೆ ಧಕ್ಕೆಯುಂಟು ಮಾಡುವ ಉದ್ದೇಶ ಸಂಸ್ಥೆಯದ್ದಲ್ಲ. ತ್ರಿವರ್ಣ ಧ್ವಜದ ಡೋರ್ ಮ್ಯಾಟ್ ಗಳು ಅಮೆಜಾನ್ ಸಂಸ್ಥೆಯದ್ದಲ್ಲ. ಬದಲಿಗೆ ಮೂರನೇ ಮಾರಾಟಗಾರನಿಂದ ಅಮೆಜಾನ್  ಸಂಸ್ಥೆಯ ವೆಬ್ ಸೈಟಿನಲ್ಲಿ ಹಾಕಲ್ಪಟ್ಟಿದೆ. ಹೀಗಾಗಿ ತ್ರಿವರ್ಣ ಧ್ವಜದ ಡೋರ್ ಮ್ಯಾಟ್ ಅನ್ನು ಅಮೆಜಾನ್ ಸಂಸ್ಥೆ ಉದ್ದೇಶಪೂರ್ವಕವಾಗಿ ಹಾಕಿಲ್ಲ. ಹೀಗಿದ್ದೂ ನಮ್ಮಿಂದ ತಪ್ಪಾಗಿದ್ದು, ನಾವು ಭೇಷರತ್ ಕ್ಷಮೆಯಾಚಿಸುತ್ತೇವೆ. ಅಲ್ಲದೆ  ಸಂಸ್ಥೆ ಕೆನಡಾ ವೆಬೈಸೈಟಿನಿಂದ ಆ ಡೋರ್ ಮ್ಯಾಟ್ ಗಳನ್ನು ತೆಗೆದು ಹಾಕಿದ್ದೇವೆ. ಮಾತ್ರವಲ್ಲದೇ ಇತರೆ ವೆಬ್ ಸೈಟ್ ಗಳಲ್ಲಿ ಮತ್ತು ಮಾರುಕಟ್ಟೆಗಳಲ್ಲಿಯೂ ಈ ಮಾದರಿಯ ಡೋರ್ ಮ್ಯಾಟ್ ಗಳನ್ನು ಮಾರಾಟ ಮಾಡದಂತೆ  ಸಂದೇಶ ರವಾನಿಸಿದ್ದೇವೆ ಎಂದು ಹೇಳಿದ್ದಾರೆ.

source -kannada prabha 

No comments