ಕಾಶ್ಮೀರದ ಬಾರಾಮುಲ್ಲಾ ಭಾರತೀಯ ಸೇನೆಯ ಗುಂಡಿಗೆ ಉಗ್ರ ಬಲಿ
ಕಾಶ್ಮೀರ : ಬಾರಾಮುಲ್ಲಾ ಜಿಲ್ಲೆಯ ಸೋಪೋರ್ ಪ್ರದೇಶದಲ್ಲಿ ಗಡಿ ಭದ್ರತಾಪಡೆಗಳ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಉಗ್ರಗಾಮಿಯೊಬ್ಬ ಬಲಿಯಾಗಿದ್ದಾನೆ .ಸೋಪೋರ್ ಪ್ರದೇಶದ ಹರಿತರ್‍ನಲ್ಲಿ ಉಗ್ರರ ಚಲನವಲನದ ಬಗ್ಗೆ ನಿಖರ ಮಾಹಿತಿ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಂದ ಭದ್ರತಾ ಪಡೆಗಳ ಯೋಧರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು. ಆಗ ಅಲ್ಲಿ ಅಡಗಿ ಕುಳಿತಿದ್ದ ಉಗ್ರರು ಇಂದು ಮುಂಜಾನೆ ಯೋಧರ ಮೇಲೆ ಗುಂಡು ಹಾರಿಸಿದಾಗ ಎನ್‍ಕೌಂಟರ್ ನಡೆಯಿತು. ಯೋಧರ ಪ್ರತಿದಾಳಿಯಲ್ಲಿ ಓರ್ವ ಉಗ್ರಗಾಮಿ ಹತನಾಗಿದ್ದು, ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಹತನಾದ ಉಗ್ರ ಪಾಕಿಸ್ತಾನ ಮೂಲದವನೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
No comments