Breaking News

ಸಚಿವ ಮಹದೇವಪ್ರಸಾದ್ ಇನ್ನಿಲ್ಲ


ಚಿಕ್ಕಮಗಳೂರು: ಕಾಂಗ್ರೆಸ್ ಹಿರಿಯ ಸಚಿವ ಮಹದೇವ ಪ್ರಸಾದ್ ಇಂದು ಬೆಳಿಗ್ಗೆ ಚಿಕ್ಕಮಗಳೂರಿನಲ್ಲಿ ವಿಧಿವಶರಾಗಿದ್ದಾರೆ. ಚಿಕ್ಕಮಗಳೂರಿನ ಸೆರಾಯ್ ರೆಸಾರ್ಟ್‍ನಲ್ಲಿದ್ದ ಸಹಕಾರ ಮತ್ತು ಸಕ್ಕರೆ ಸಚಿವ ಮಹದೇವ ಪ್ರಸಾದ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಕೊಪ್ಪದಲ್ಲಿ ನಡೆಯಬೇಕಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿದ್ದ ಕಾರಣ ಮಹದೇವಪ್ರಸಾದ್ ಚಿಕ್ಕಮಗಳೂರಿಗೆ ತೆರಳಿದ್ದರು. ಸೆರಾಯ್ ರೆಸಾರ್ಟ್‍ನಲ್ಲಿ ತಂಗಿದ್ದ ಅವರು, ಬೆಳಿಗ್ಗೆ 9 ಗಂಟೆಯಾದರೂ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಮಹದೇವ್ ಪ್ರಸಾದ್ ಆತ್ಮೀಯರು ಬಾಗಿಲು ತೆರೆದು ನೋಡಿ ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಮುಂದಾದ್ರು. ಆದ್ರೆ ಅಷ್ಟರಲ್ಲಾಗಲೇ ಮಹದೇವಪ್ರಸಾದ್ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದು ಬಂದಿದೆ 


No comments